ನವದೆಹಲಿ: ಪಾಕಿಸ್ತಾನ ಕಂಡ ಶ್ರೇಷ್ಠ ವೇಗಿ ಶೋಯೆಬ್ ಅಖ್ತರ್ ಇತ್ತೀಚೆಗೆ ಭಾರತ ತಂಡದ ಬೌಲಿಂಗ್ ಕೋಚ್ ಆಗಲು ಸಿದ್ದವೆಂದು ತಿಳಿಸಿದ್ದರು, ಇದೀಗ ತಮ್ಮ ಜೀವಾನಾಧಾರಿತ ಚಿತ್ರವೇನಾದರೂ ಮಾಡಿದ್ದೇ ಆದರೆ ಅದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸಬೇಕು ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.
ವಿಶ್ವ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಬೌಲಿಂಗ್ ದಾಖಲೆ ಹೊಂದಿರುವ ಅಖ್ತರ್ ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿದ್ದಾರೆ. ಈಗಾಗಲೆ ಕ್ರಿಕೆಟರ್ಗಳ ಬಯೋಪಿಕ್ ಬಹಳಷ್ಟು ಬಂದು ಹೋಗಿವೆ, ಅದರಲ್ಲಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವಾನಾದರಿತ ಸಿನಿಮಾ ‘ಧೋನಿ ದಿ ಅನ್ಟೋಲ್ಡ್ ಸ್ಟೋರಿ’ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು.
ಶೋಯೆಬ್ ಅಖ್ತರ್ - ಸಲ್ಮಾನ್ ಖಾನ್ ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ತಮ್ಮ ಬಯೋಪಿಕ್ ಮಾಡುವುದಾದರೆ ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸಬೇಕು ಎಂದು ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಶೊಯೆಬ್ ಅಖ್ತರ್ ತಿಳಿಸಿರುವ ವಿಚಾರವನ್ನು ಪಾಕಿಸ್ತಾನ ಜರ್ನಲಿಸ್ಟ್ ಸಾಜ್ ಸಾದಿಕ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.
ಅಖ್ತರ್ ಸಲ್ಮಾನ್ ಖಾನ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. 2016ರಲ್ಲಿಅವರು ಬಾಲಿವುಡ್ ನಟನನ್ನು ದುಬೈನಲ್ಲಿ ಭೇಟಿ ಮಾಡಿದ್ದರು.ಈ ವೇಳೆ ಅವರೊಂದಿಗೆ ಫೋಟೋ ತಾವೂ ಎಂಜಾಯ್ ಮಾಡುತ್ತಿರುವುದಾಗಿ ಟ್ವೀಟ್ ಮಾಡಿದ್ದರು. ಇನ್ನು ಸಲ್ಮಾನ್ ಅವರ ‘ಬೀಯಿಂಗ್ ಹ್ಯೂಮನ್’ಫೌಂಡೇಶನ್‌ನಿಂದ ಆಗುತ್ತಿರುವ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅಖ್ತರ್ ಪಾಕಿಸ್ತಾನ ಪರ 46 ಟೆಸ್ಟ್ ಪಂದ್ಯಗಳನ್ನಾಡಿದ್ದು 178 ವಿಕೆಟ್ ಹಾಗೂ 163 ಏಕದಿನ ಪಂದ್ಯಗಳಿಂದ 247 ವಿಕೆಟ್ ಪಡೆದಿದ್ದಾರೆ.