ಲಾಹೋರ್:ಆಫ್ಘಾನಿಸ್ತಾನ ತಂಡದಲ್ಲಿರುವ ಬಹುಪಾಲು ಆಟಗಾರರು ಪೇಶಾವರದ ಗುರುತಿನ ಚೀಟಿಯನ್ನು ಹೊಂದಿರುವುದರಿಂದ ಆಫ್ಘನ್ ತಂಡವನ್ನು ನಿಷೇಧಿಸಬೇಕು ಎಂದು ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ಪಾಕಿಸ್ತಾನ ತಂಡ ಆಫ್ಘನ್ ಟೀಮ್ನಿಂದ ಕ್ರಿಕೆಟ್ ಹೇಗೆ ಆಡಬೇಕೆಂಬುದನ್ನು ಕಲಿಯಬೇಕು. ನಮ್ಮ ತಂಡದಿಂದ ಕೋಚಿಂಗ್ ತೆಗೆದುಕೊಳ್ಳುವ ಅವಶ್ಯಕತೆ ಪಾಕ್ ತಂಡಕ್ಕೆ ತುಂಬಾ ಇದೇ ಎಂದು ಹೇಳಿಕೆ ನೀಡಿದ್ದರು.
ಆಫ್ಘಾನ್ ಅಧಿಕಾರಿಯ ಹೇಳಿಕೆಯಿಂದ ರೊಚ್ಚಿಗೆದ್ದಿರುವ ಅಖ್ತರ್, ಎಸಿಬಿ ಸಿಇಒ ಶಫೀಕ್ ಸ್ಟಾನಿಕ್ಝೈ ಕುರಿತು," ಒಂದು ಸಮಯದಲ್ಲಿ ಆಫ್ಘಾನ್ ತಂಡಕ್ಕೆ ಪಾಕಿಸ್ತಾನ ಮೂಲದ ಆಟಗಾರರನ್ನು ಆಯ್ಕೆ ಮಾಡಲಾಗುತ್ತಿತ್ತು. ಅಂದು ಪಾಕಿಸ್ತಾನದ ಕ್ರಿಕೆಟ್ ಮೈದಾನಗಳನ್ನು ಬಳಸಿಕೊಂಡು ಬೆಳೆದ ತಂಡ ಇಂದು ಭಾರತದ ನೆರವಿನಿಂದ ನೋಯ್ಡಾ ಹಾಗೂ ಡೆಹರಾಡೂನ್ನ ತವರು ಮೈದಾನಗಳಾಗಿ ಮಾಡಿಕೊಂಡು ಕ್ರಿಕೆಡ್ನಲ್ಲಿ ಒಂದು ಉತ್ತಮ ತಂಡವಾಗಿ ಬೆಳೆದಿದೆ. ಆದರೆ, ಭಾರತೀಯರಿಂದ ಕ್ರಿಕೆಟ್ ಆಡುವುದನ್ನು ಮಾತ್ರ ಕಲಿತಿರುವ ನೀವು, ಅವರಿಂದ ಸಭ್ಯತೆಯನ್ನೂ ಕಲಿತಿಲ್ಲ" ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಕಿಡಿಕಾರಿದ್ದಾರೆ.
ಅಲ್ಲದೆ ಆಫ್ಘಾನ್ ತಂಡದಲ್ಲಿ ಬಹುಪಾಲು ಆಟಗಾರರ ಪೌರತ್ವವನ್ನು ಪರೀಕ್ಷಿಸಿದರೆ, ಬಹುಪಾಲು ಆಟಗಾರರು ಪೇಶಾವರ ಮೂಲದವರಾಗಿದ್ದಾರೆ. ಇದೊಂದೇ ಕಾರಣದಿಂದ ಅಫ್ಘಾನಿಸ್ತಾನ ತಂಡವನ್ನು ನಿಷೇಧಿಸಬಹುದು ಎಂದು ಅಖ್ತರ್ ತಮ್ಮ ವಿಡಿಯೋದಲ್ಲಿ ಕೆಂಡಕಾರಿದ್ದಾರೆ.