ಕರ್ನಾಟಕ

karnataka

ETV Bharat / sports

ಏಷ್ಯಾಕಪ್​ ಆತಿಥ್ಯದ ಮೇಲೆ ಬಾಂಗ್ಲಾ ಕಣ್ಣು.. ಅಖ್ತರ್ ಸಿಡಿಸಿದ್ರು ಹೊಸ ಬಾಂಬ್! - ಪಾಕ್ ಮಾಜಿ ಕ್ರಿಕೆಟರ್ ಶೋಯಬ್​ ಅಖ್ತರ್

ಈ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾಕಪ್‌ನ ಆತಿಥೇಯ ಹಕ್ಕು ಪಡೆಯುವುದಕ್ಕಾಗಿ ಬಾಂಗ್ಲಾದೇಶ, ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಒಪ್ಪಿಕೊಂಡಿರಬಹುದು ಎಂಬ ವರದಿಗಳಿವೆ ಎಂದು ಪಾಕ್ ಮಾಜಿ ಕ್ರಿಕೆಟರ್ ಶೋಯಬ್​ ಅಖ್ತರ್ ಹೇಳಿದ್ದಾರೆ.

Deal between Bangladesh and Pakistan,ಷ್ಯಾಕಪ್​ ಆತಿಥ್ಯದ ಮೇಲೆ ಬಾಂಗ್ಲಾ ಕಣ್ಣು
ಶೋಯಬ್​ ಅಖ್ತರ್

By

Published : Jan 17, 2020, 10:20 AM IST

ಇಸ್ಲಾಮಾಬಾದ್:ಫೆಬ್ರವರಿಯಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಒಪ್ಪಿಕೊಂಡಿರುವ ಬಾಂಗ್ಲಾದೇಶ ಏಷ್ಯಾ ಕಪ್ ಟಿ-20 ಟೂರ್ನಮೆಂಟ್ ಆತಿಥ್ಯದ ಮೇಲೆ ಕಣ್ಣಿಟ್ಟಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯಬ್ ಅಖ್ತರ್ ಹೇಳಿದ್ದಾರೆ.

ಪಾಕ್ ಪ್ರವಾಸ ಕೈಗೊಳ್ಳಲು ಒಪ್ಪಿಕೊಂಡಿರುವ ಬಾಂಗ್ಲಾ, ಏಷ್ಯಾಕಪ್ ಆತಿಥ್ಯವನ್ನ ಪಾಕಿಸ್ತಾನದಿಂದ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ಶೋಯಬ್ ಅಖ್ತರ್ ತಮ್ಮ ಯೂಟ್ಯೂಬ್​ ಚಾನಲ್​ನ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ನೆಲದಲ್ಲಿ ಆಟವಾಡಲು ಭಾರತ ತಂಡ ಒಪ್ಪಲು ಸಾಧ್ಯವೇ ಇಲ್ಲ ಎಂಬ ಮಾತು ಏಷ್ಯಾ ಕಪ್​ ಟೂರ್ನಿ ಸ್ಥಳಾಂತರಕ್ಕೆ ಕಾರಣ ಎನ್ನಲಾಗುತ್ತಿದೆ. ಈ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್‌ನ ಆತಿಥೇಯ ಹಕ್ಕು ಪಡೆಯುವುದಕ್ಕೆ ಬಾಂಗ್ಲಾದೇಶ, ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಒಪ್ಪಿಕೊಂಡಿರಬಹುದು ಎಂಬ ವರದಿಗಳಿವೆ ಎಂದು ಅಖ್ತರ್ ಹೇಳಿದ್ದಾರೆ.

ಪಿಸಿಬಿ, ಇಶಾನ್ ಮಣಿ ಮತ್ತು ವಾಸಿಮ್ ಖಾನ್ ಅವರ ಕಠಿಣ ಪರಿಶ್ರಮದಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಾಕಿಸ್ತಾನಕ್ಕೆ ಮರಳಿದೆ. ಇರಾನ್ ಮತ್ತು ಅಮೆರಿಕ ನಡುವಿನ ರಾಜಕೀಯ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನದ ಬದಲು ದುಬೈನಲ್ಲಿ ಆಡಲು ಬಾಂಗ್ಲಾದೇಶ ವಿನಂತಿಸಿದೆ ಎಂದು ನಾನು ಕೇಳಿದ್ದೇನೆ. ಆದರೆ, ಪಾಕಿಸ್ತಾನವು ಆ ಉದ್ವೇಗದಿಂದ ದೂರವಿರುವುದರಿಂದ ಇದು ಅಸಮಂಜಸ ಎಂದೂ ತಿಳಿದಿದ್ದೇನೆ ಎಂದಿದ್ದಾರೆ.

ಪಾಕಿಸ್ತಾನವು ಸುರಕ್ಷಿತ ದೇಶವಾಗಿದೆ, ದಾಳಿಗೊಳಗಾದ ಶ್ರೀಲಂಕಾ ಆಟಗಾರರು ಪಾಕಿಸ್ತಾನಕ್ಕೆ ಬಂದು ಯಾವುದೇ ಅಪಾಯವಿಲ್ಲ ಎಂದು ಅವರೇ ಸಾಬೀತುಪಡಿಸಿದ್ದಾರೆ. ಸರಣಿ ವಿಭಜನೆ ಪ್ರಪಂಚಕ್ಕೆ ಉತ್ತಮ ಸಂದೇಶ ನೀಡುವುದಿಲ್ಲ. ನೀವು ಪಾಕಿಸ್ತಾನಕ್ಕೆ ಬಂದು ಕ್ರಿಕೆಟ್ ಆಡಿ ಎಂದು ಅಖ್ತರ್ ಹೇಳಿದ್ದಾರೆ.

ABOUT THE AUTHOR

...view details