ನವದೆಹಲಿ:ಭಾರತ ತಂಡ ತಮ್ಮ ಅತ್ಯುತ್ತಮ ಆಯ್ಕೆಯ ಬೌಲರ್ಗಳನ್ನು ಕಳೆದುಕೊಂಡಿದೆ. ಆದರೂ ತಮ್ಮ ಪಾತ್ರವನ್ನು ಬಿಟ್ಟುಕೊಟ್ಟದೆ ಸಂಪೂರ್ಣ ಬಲವುಳ್ಳ ಆಸ್ಟ್ರೇಲಿಯಾ ತಂಡಕ್ಕಿಂತ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಟೀಮ್ ಇಂಡಿಯಾವನ್ನು ಶ್ಲಾಘಿಸಿದ್ದಾರೆ.
"ಭಾರತ ತಂಡ ತಮ್ಮ ಸ್ಟಾರ್ ಆಟಗಾರರನ್ನು ಗಾಯದ ಕಾರಣ ಕಳೆದುಕೊಂಡಿದೆ. ಮೆಚ್ಚಬೇಕಾದ ಅಂಶವೆಂದರೆ, ತಂಡ ಎಲ್ಲಾ ಆಟಗಾರರಿಗೂ ಬದಲಿ ಆಟಗಾರರನ್ನು ಹೊಂದಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಇಂತಹ ಸನ್ನಿವೇಶದಲ್ಲಿ ತಾವೂ ಆಡಬಹುದು ಎಂದು ಊಹಿಸದ ಮಕ್ಕಳೊಂದಿಗೆ (ಸುಂದರ್, ನಟರಾಜನ್, ಸಿರಾಜ್ ಮತ್ತು ಶಾರ್ದುಲ್) ಸರಣಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಆಡುತ್ತಿದೆ. ಅದರಲ್ಲೂ ಅರ್ಧಬಲ ಹೊಂದಿರುವ ಭಾರತ ತಂಡ ಪೂರ್ಣ ಸಾಮರ್ಥ್ಯದ ಆಸ್ಟ್ರೇಲಿಯಾ ತಂಡಕ್ಕಿಂದ ಅತ್ಯುತ್ತಮವಾಗಿದೆ ಎಂದು ಭಾವಿಸುತ್ತೇನೆ" ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ಗಾಯಗಳ ಪರಿಣಾಮ ರೋಹಿತ್, ಪೂಜಾರ, ಮತ್ತು ರಹಾನೆಯಂತಹ ಕೆಲವೇ ಕೆಲವು ದೊಡ್ಡ ಆಟಗಾರರು ತಂಡದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅನನುಭವಿ ಆಟಗಾರರು ಬೆಂಕಿಯಂತಹ ಚೆಂಡಿನ ದಾಳಿಯ ವಿರುದ್ಧ ಮೇಲುಗೈ ಸಾಧಿಸಿದ್ದಾರೆ. ಈ ತಂಡದಿಂದ ಆಸ್ಟ್ರೇಲಿಯಾವನ್ನು ಸೋಲಿಸಲು ಸಾಧ್ಯವಾದರೆ, ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿದೊಡ್ಡ ಸರಣಿ ಜಯವಾಗಲಿದೆ ಎಂದು ಪಾಕ್ ವೇಗಿ ಹೇಳಿದ್ದಾರೆ.
ಅವರು ಫೈನಲ್ ಟೆಸ್ಟ್ಗೆ ಬಂದಿದ್ದಾರೆ, ಆದರೆ ಸಂಪೂರ್ಣ ತಂಡವನ್ನು ಹೊಂದಿಲ್ಲ. ಆದರೂ ಹೋರಾಟ ನಡೆಸುತ್ತಲೇ ಇದ್ದಾರೆ. ಇದು ನಿಜವಾದ ವ್ಯಕ್ತಿತ್ವ ಎಂದು ನಾನು ಹೇಳುತ್ತೇನೆ. ಈ ತಂಡವನ್ನು ನಾನು ಬಿ ಟೀಮ್ ಎಂದು ಕರೆಯಲಾರೆ, ಆದ್ರೆ ಅವರೇ ಈ ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿ, ಡ್ರಾ ಸಾಧಿಸಿದರೂ, ಇದೊಂದು ಐತಿಹಾಸಿಕ ಕ್ಷಣ. ಅದಕ್ಕೆ ಅವರು ಗರ್ವ ಪಡಬಹುದು ಎಂದು ಅಖ್ತರ್ ಹೇಳಿದ್ದಾರೆ.
ಇದನ್ನೂ ಓದಿ: ಶಾರ್ದುಲ್ ಠಾಕೂರ್, ಸುಂದರ್ ಆಟಕ್ಕೆ ಕ್ಯಾಪ್ಟನ್ ಕೊಹ್ಲಿ ಬಹುಪರಾಕ್