ಇಸ್ಲಮಾಬಾದ್:ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ 10 ವಿಕೆಟ್ಗಳ ಸೋಲು ಅನುಭವಿಸಿದೆ. ಈ ಸೋಲಿನಿಂದ ಬೇಸರಗೊಂಡಿರುವ ಪಾಕ್ ಮಾಜಿ ಕ್ರಿಕೆಟರ್ ಶೊಯೆಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಿಸಿಬಿ ನಡೆಯನ್ನ ಟೀಕಿಸಿರುವ ಅಖ್ತರ್, ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ರಾಹುಲ್ ದ್ರಾವಿಡ್ ಅಂಡರ್-19 ತಂಡಕ್ಕೆ ಕೋಚ್ ಆಗಿದ್ದರು. ಒಬ್ಬ ಉತ್ತಮ ಆಟಗಾರರನ್ನ ನೀವು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿದಾಗ ಅದಕ್ಕೆ ತಕ್ಕ ಸಂಭಾವನೆ ನೀಡಬೇಕು ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.