ಬೆಂಗಳೂರು:ಶಿವಮೊಗ್ಗ ಲಯನ್ಸ್ ತಂಡದ ನಾಯಕ ಅಭಿಮನ್ಯು ಮಿಥುನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 9ನೇ ಪಂದ್ಯದಲ್ಲಿ ಅತಿಥೇಯ ಬೆಂಗಳೂರು ಬ್ಲಾಸ್ಟರ್ 7 ವಿಕೆಟ್ಗಳಿಂದ ಮುಗ್ಗರಿಸಿದೆ. ಟಾಸ್ ಸೋತರು ಬ್ಯಾಟಿಂಗ್ ನಡೆಸಿದ ಬೆಂಗಳೂರು 16 ಓವರ್ಗಳಲ್ಲಿ 114 ರನ್ಗಳಿಸಿತು. ಈ ವೇಳೆ ಮಳೆ ಬಿದ್ದಿದ್ದರಿಂದ ಮೊದಲ ಇನ್ನಿಂಗ್ಸ್ ಸ್ಥಗಿತಗೊಳಿಸಲಾಗಿತ್ತು.
ಬೆಂಗಳೂರು ಪರ ಶರತ್ ಬಿಆರ್ 23 ಎಸೆತಗಳಲ್ಲಿ 42, ರೋಹನ್ ಕಡಮ್ 25, ನಿಕಿ ಜೋಸ್ 23, ಕೆಎನ್ ಭರತ್ 16 ರನ್ಗಳಿಸಿದ್ದರು. ಶಿವಮೊಗ್ಗ ಪರ ಪವನ್ ದೇಶಪಾಂಡೆ 2 ವಿಕೆಟ್, ಪೃಥ್ವಿರಾಜ್ ಶೇಕಾವತ್ ಒಂದು ವಿಕೆಟ್ ಪಡೆದರು.
ಮಳೆಯ ಕಾರಣ ವಿಜೆಡಿ ಮೆಥಡ್ ಪ್ರಕಾರ 12 ಓವರ್ಗಳಲ್ಲಿ 106 ರನ್ಗಳ ಟಾರ್ಗೆಟ್ ನೀಡಲಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ಅರ್ಜುನ್ ಹೋಯ್ಸಳ 10 ಬಾಲ್ಗಳಲ್ಲಿ 16 ರನ್ಗಳಿಸಿ ಔಟಾದರು. ಮತ್ತೊಬ್ಬ ಆರಂಭಿಕ ನಿಹಾಲ್ ಉಲ್ಲಾಳ್ 17 ಎಸೆತಗಳಲ್ಲಿ 33 ರನ್ಗಳಿಸಿದ್ದರು. ಅವರು 3 ಬೌಂಡರಿ 2 ಸಿಕ್ಸರ್ ಸಿಡಿಸಿದರು. ಆದರೆ ನಾಯಕ ಮಿಥುನ್ 13 ಎಸೆತಗಳಲ್ಲಿ 4 ಸಿಕ್ಸರ್, 1 ಬೌಂಡರಿ ಸಿಡಿಸಿ ತಂಡಕ್ಕೆ ಇನ್ನು 11 ಎಸೆತಗಳಿರುವಂತೆ ಸತತ 3ನೇ ಗೆಲುವು ತಂದುಕೊಟ್ಟರು.
ಆನಂದ್ ದೊಡ್ಡಮನಿ 2 ವಿಕೆಟ್ ಹಾಗೂ ಭರತ್ ದೇವರಾಜ್ 1 ವಿಕೆಟ್ ಪಡೆದರು.