ತಿರುವನಂತಪುರಂ:ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸ್ಥಾನಕ್ಕೆ ಬಡ್ತಿ ಪಡೆದುಕೊಂಡು ಮೈದಾನಕ್ಕಳಿದಿದ್ದ ಆಲ್ರೌಂಡರ್ ಶಿವಂ ದುಬೆ ಮೂರು ಸಿಕ್ಸರ್ ಸೇರಿ ಕೇವಲ 30 ಎಸೆತಗಳಲ್ಲಿ 54 ರನ್ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮೂರನೇ ಕ್ರಮಾಂಕದಲ್ಲಿ ಮಿಂಚಿದ ದುಬೆ... ಕೆಣಕಿದ ಪೋಲಾರ್ಡ್ ಓವರ್ನಲ್ಲಿ ರನ್ ಸುರಿಮಳೆ! - ಪೋಲಾರ್ಡ್ ಓವರ್ನಲ್ಲಿ ಶಿವಂ ದುಬೆ
ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಶಿವಂ ದುಬೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾರೆ.
![ಮೂರನೇ ಕ್ರಮಾಂಕದಲ್ಲಿ ಮಿಂಚಿದ ದುಬೆ... ಕೆಣಕಿದ ಪೋಲಾರ್ಡ್ ಓವರ್ನಲ್ಲಿ ರನ್ ಸುರಿಮಳೆ! Shivam Dube](https://etvbharatimages.akamaized.net/etvbharat/prod-images/768-512-5313810-thumbnail-3x2-wdfdfdf.jpg)
ಶಿವಂ ದುಬೆ ಬ್ಯಾಟ್ ಮಾಡುತ್ತಿದ್ದ ವೇಳೆ ಕೆಣಕಿದ ವೆಸ್ಟ್ ಇಂಡೀಸ್ ನಾಯಕ ಕೀರಾನ್ ಪೋಲಾರ್ಡ್ಗೆ ದುಬೆ ಮೂರು ಸಿಕ್ಸರ್ ಸಿಡಿಸಿ ಪ್ರತ್ಯುತ್ತರ ನೀಡಿದರು. ಪೋಲಾರ್ಡ್ ಎಸೆದ 9ನೇ ಓವರ್ನ ಎರಡನೇ ಎಸೆತದಲ್ಲಿ ದುಬೆ ಎರಡು ರನ್ ಕದಿಯಲು ಮುಂದಾಗಿದ್ದ ವೇಳೆ ಪಿಚ್ ಮಧ್ಯೆ ನಿಂತು ಅವರಿಗೆ ಅಡ್ಡಿಪಡಿಸಿದ್ರು. ಹೀಗಾಗಿ ಆಕ್ರೋಶಗೊಂಡ ದುಬೆ ಮೂರನೇ ಎಸೆತ ಸಿಕ್ಸರ್ಗೆ ಅಟ್ಟಿದರು. ತದನಂತರ ವೆಸ್ಟ್ ಇಂಡೀಸ್ ಕ್ಯಾಪ್ಟನ್ ಸತತ ಎರಡು ವೈಡ್ ಎಸೆದರು. ನಂತರ ಸಿಕ್ಕ ಎರಡು ಬಾಲ್ನಲ್ಲಿ ದುಬೆ ಸಿಕ್ಸರ್ ಸಿಡಿಸಿ, ಕೊನೆ ಎಸೆತದಲ್ಲಿ 1 ರನ್ ಗಳಿಸಿದರು. ಹೀಗಾಗಿ ಒಂದೇ ಓವರ್ನಲ್ಲಿ ಪೋಲಾರ್ಡ್ 26 ರನ್ ಬಿಟ್ಟುಕೊಟ್ಟರು.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿವಂ ದುಬೆ 27 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದರು. ಇದು ಅವರ ಟಿ-20 ವೃತ್ತಿ ಜೀವನದ ಮೊದಲ ಅರ್ಧಶತಕ. ಈ ಮೂಲಕ ಚುಟುಕು ಕ್ರಿಕೆಟ್ನಲ್ಲಿ ತಾವು ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಸ್ಥಾನ ತುಂಬುವೆ ಎಂಬ ಉತ್ತರ ನೀಡಿದರು.