ಕರ್ನಾಟಕ

karnataka

ETV Bharat / sports

ಶಿಖರ್​ ಧವನ್​ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆಯುವುದು ಅನುಮಾನ: ಆಕಾಶ್​ ಚೋಪ್ರಾ - ರೋಹಿತ್ ಶರ್ಮಾ. ಮಯಾಂಕ್ ಅಗರ್​ವಾಲ್​

34 ವರ್ಷದ ಧವನ್​ ಮತ್ತೆ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆಯುವರೇ ಎಂಬ ಪ್ರಶ್ನೆಗೆ ಆಕಾಶ್​ ಚೋಪ್ರಾ, 'ಅನುಮಾನ' ಎಂದು ಉತ್ತರಿಸಿದ್ದಾರೆ.

ಶಿಖರ್​ ಧವನ್
ಶಿಖರ್​ ಧವನ್

By

Published : Jul 28, 2020, 4:26 PM IST

ಮುಂಬೈ:ಭಾರತ ತಂಡದ ಸ್ಟಾರ್​ ಓಪನಿಂಗ್​ ಬ್ಯಾಟ್ಸ್​ಮನ್ ಶಿಖರ್​ ಧವನ್​ ಪಾಲಿಗೆ ಟೆಸ್ಟ್​ ಕ್ರಿಕೆಟ್​ ಬಾಗಶಃ ಅಂತ್ಯವಾದಂತೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್​ ಆಕಾಶ್​ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಭಾರತದ ಅತ್ಯುತ್ತಮ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದ ಶಿಖರ್​ ಧವನ್​ ಭಾರತದ ಪರ 34 ಟೆಸ್ಟ್​ ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 7 ಶತಕಗಳ ಸಹಿತ 40.61ರ ಸರಾಸರಿಯಲ್ಲಿ 2315 ರನ್​ ಗಳಿಸಿದ್ದಾರೆ. ಆದರೆ 2018ರಲ್ಲಿ ಕಳೆಪೆ ಬ್ಯಾಟಿಂಗ್ ಕಾರಣ ಟೆಸ್ಟ್​ ತಂಡದಿಂದ ಹೊರ ಬಿದ್ದಿದ್ದರು. 2018ರಲ್ಲಿ ಇಂಗ್ಲೆಂಡ್​ ವಿರುದ್ಧ ಕೊನೆಯ ಬಾರಿ ಟೆಸ್ಟ್​ನಲ್ಲಿ ಕಾಣಿಸಿಕೊಂಡಿದ್ದರು.

34 ವರ್ಷದ ಧವನ್​ ಮತ್ತೆ ಟೆಸ್ಟ್​ ತಂಡದಲ್ಲಿ ಅವಕಾಶ ಪಡೆಯುವರೇ ಎಂಬ ಪ್ರಶ್ನೆಗೆ ಆಕಾಶ್​ ಚೋಪ್ರಾ, 'ಅನುಮಾನ' ಎಂದು ಉತ್ತರಿಸಿದ್ದಾರೆ.

"ಅವಕಾಶ ಸಿಗುವುದಿಲ್ಲ ಎಂದು ಹೇಳಬೇಡಿ, ಅವರಿಗೆ ಅವಕಾಶ ಸಿಗಬಹುದು. ಆದರೆ ಆದಷ್ಟು ಬೇಗ ಅವರಿಗೆ ಅವಕಾಶ ಸಿಗುವುದೇ? ಟೆಸ್ಟ್ ತಂಡದಲ್ಲಿ ಓಪನರ್‌ಗಳಾಗಿ ಈಗಾಗಲೇ ಹಲವಾರು ಆಯ್ಕೆಗಳು ಇರುವುದರಿಂದ ಸದ್ಯಕ್ಕೆ ಶಿಖರ್​ ಧವನ್​ ಆಯ್ಕೆ ಸಂಭವಿಸಬಹುದು ಎಂದು ನಾನು ಭಾವಿಸುವುದಿಲ್ಲ" ಎಂದು ಚೋಪ್ರಾ ತಮ್ಮ ಯುಟ್ಯೂಬ್ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ.

ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ ಮತ್ತು ಕೆ.ಎಲ್.ರಾಹುಲ್​ರಂತಹ ಹೆಸರುಗಳು ಭಾರತ ತಂಡದ ನಾಲ್ಕು ಆಯ್ಕೆಗಳಾಗಿವೆ. 5ನೇ ಸ್ಥಾನದಲ್ಲಿರುವ ಧವನ್ ಮೊದಲು ಹೊಂದಿದ್ದ ಶಕ್ತಿಯ ಸ್ಥಾನವನ್ನು ಈಗ ಹೊಂದಿಲ್ಲ ಮತ್ತು ಆ ಸವಲತ್ತು ಇನ್ನು ಮುಂದೆ ಸಿಗುವುದಿಲ್ಲ. ಆದ್ದರಿಂದ ಶಿಖರ್ ಧವನ್ ಭವಿಷ್ಯದಲ್ಲಿ ಯಾವಾಗದಲಾದರೂ ತಂಡದಲ್ಲಿ ಸ್ಥಾನ ಪಡೆಯಹುದೇನೋ, ಆದರೆ ಸದ್ಯದಲ್ಲಿ ಸಾಧ್ಯವಿಲ್ಲ. ಏಕೆಂದರೆ ತಂಡ ಅವರನ್ನು ಬಿಟ್ಟು ಮುಂದೆ ಹೋಗಿದೆ ಎಂದು ಅವರು ವಿವರಿಸಿದ್ದಾರೆ.

ABOUT THE AUTHOR

...view details