ಕರ್ನಾಟಕ

karnataka

ETV Bharat / sports

ಗಾಯಗೊಂಡು ವಿಶ್ವಕಪ್​​ನಿಂದ ಶಿಖರ್​ ಧವನ್ ಔಟ್​​... ರಿಷಭ್​ ಪಂತ್​ಗೆ ಅವಕಾಶ!

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಹೆಬ್ಬೆರಳಿನ ಗಾಯಕ್ಕೊಳಗಾಗಿದ್ದ ಶಿಖರ್​ ಧವನ್​, ಇದೀಗ ವಿಶ್ವಕಪ್​ ಮಹಾಟೂರ್ನಿಯಿಂದ ಹೊರಬಿದ್ದಿದ್ದಾರೆ.

By

Published : Jun 19, 2019, 5:00 PM IST

Updated : Jun 19, 2019, 5:18 PM IST

ಶಿಖರ್​ ಧವನ್​

ಲಂಡನ್​:ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಹೆಬ್ಬೆರಳು ಗಾಯಕ್ಕೊಳಗಾದ ಬಳಿಕ,ತಂಡದ ಆರಂಭಿಕ ಎಡಗೈ ಬ್ಯಾಟ್ಸ್​​ಮನ್​ ಶಿಖರ್​ ಧವನ್ ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ​ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆದರೂ ಚೇತರಿಕೆ ಕಾಣದ ಕಾರಣ ವಿಶ್ವಕಪ್​ ಮಹಾ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಗಾಯಾಳು ಶಿಖರ್​

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ 117ರನ್​ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದ್ದ ಶಿಖರ್​, ಇದೇ ವೇಳೆ ಹೆಬ್ಬೆರಳಿನ ಗಾಯಕ್ಕೊಳಗಾಗಿ, ತಂಡದಿಂದ ಹೊರಬಿದ್ದಿದ್ದರು. ಆದರೆ, ಇವರ ಮೇಲೆ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ ಮೂರು ವಾರಗಳ ಕಾಲ ನಿಗಾವಹಿಸಿತ್ತು. ಹೆಬ್ಬೆರಳಿಗೆ ಪ್ಲಾಸ್ಟರ್​ ಹಾಕಿದ್ದರಿಂದ ಅವರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನ ಕಾಯ್ದುನೋಡಬೇಕಾಗುತ್ತದೆ ಎಂದು ವಿರಾಟ್​ ಕೊಹ್ಲಿ ಈ ಹಿಂದೆ ತಿಳಿಸಿದ್ದರು.

ಶಿಖರ್​ ಗಾಯಗೊಂಡಿದ್ದರಿಂದ ಟೀಂ ಇಂಡಿಯಾ ರಿಷಭ್​ ಪಂತ್​ ಅವರನ್ನ ಬ್ಯಾಕಪ್​ ಆಟಗಾರನಾಗಿ ಇಂಗ್ಲೆಂಡ್​ಗೆ ಕರೆಯಿಸಿಕೊಂಡಿತು. ಟೂರ್ನಿಯಿಂದ ಶಿಖರ್​ ಹೊರಬಿದ್ದಿರುವುದು ಖಚಿತಗೊಳ್ಳದ ಕಾರಣಕ್ಕಾಗಿ ಟೀಂ ಇಂಡಿಯಾ ಪಂತ್​ ಡ್ರೆಸ್ಸಿಂಗ್​ ರೂಂ ಸೇರಿಕೊಂಡಿರಲಿಲ್ಲ. ಇದೀಗ ಶಿಖರ್​ ಧವನ್​ ವಿಶ್ವಕಪ್​​ನಿಂದ ಹೊರಗುಳಿಯುತ್ತಿರುವ ಮಾಹಿತಿ ಹೊರಹಾಕಿದ್ದರಿಂದ, ಅವರ ಸ್ಥಾನ ಪಂತ್ ತುಂಬಲಿದ್ದಾರೆ.

ರಿಷಭ್​ ಪಂತ್​

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ತಂಡದ ಮ್ಯಾನೇಜರ್​ ಸುನೀಲ್​ ಸುಬ್ರಮಣಿಯಮ್​,ಶಿಖರ್​ ಧವನ್​ ಅವರ ಎಡಗೈ ಅಂಗೈ ಮುರಿತುಗೊಂಡಿದ್ದು, ಜುಲೈ ಮಧ್ಯದವರೆಗೂ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಅವರು ವಿಶ್ವಕಪ್​ ಟೂರ್ನಿಯಿಂದ ಹೊರಗುಳಿಯಲಿದ್ದು, ರಿಷಭ್​ ಪಂತ್​ಗೆ ತಂಡ ಸೇರಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಪಾಕ್​ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.​ ರಾಹುಲ್​ ಆರಂಭಿಕರಾಗಿ ಕಣಕ್ಕಿಳಿದು, ರೋಹಿತ್​ ಜತೆ ಇನ್ನಿಂಗ್ಸ್​ ಆರಂಭಿಸಿದ್ದು, ಮಧ್ಯಮ ಕ್ರಮಾಂಕದಲ್ಲಿ ವಿಜಯ್​ ಶಂಕರ್​ ತಂಡವನ್ನ ಸೇರಿಕೊಂಡಿದ್ದಾರೆ.

Last Updated : Jun 19, 2019, 5:18 PM IST

ABOUT THE AUTHOR

...view details