ಕರ್ನಾಟಕ

karnataka

ETV Bharat / sports

ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪ್ರಕಟ: ಎ ಗ್ರೇಡ್​ನಲ್ಲಿ ಮೂವರು , ಸಿ ಗ್ರೇಡ್​ನಲ್ಲಿ 15 ವರ್ಷದ ಶೆಫಾಲಿ - ಎ ಗ್ರೇಡ್​ನಿಂದ ಬಿ ಗ್ರೇಡ್​ಗೆ ಕುಸಿದ ಮಿಥಾಲಿ ರಾಜ್​

15 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಹರಿಯಾಣದ ಶಫಾಲಿ ವರ್ಮಾ ಮೊದಲ ಬಾರಿಗೆ ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

bcci annual contract
shefali Varma

By

Published : Jan 16, 2020, 7:04 PM IST

Updated : Jan 16, 2020, 7:16 PM IST

ಮುಂಬೈ:ಮಹಿಳಾ ಕ್ರಿಕೆಟರ್​ಗಳ ವಾರ್ಷಿಕ ಗುತ್ತಿಗೆಯನ್ನು ಬಿಸಿಸಿಐ ಪ್ರಕಟಿಸಿದ್ದು, 15 ವರ್ಷದ ಶೆಫಾಲಿ ವರ್ಮಾ ವಾರ್ಷಿಕ ಗುತ್ತಿಗೆಯಲ್ಲಿ ಅವಕಾಶ ಪಡೆದಿದ್ದಾರೆ.

ಟಿ-20 ತಂಡದ ನಾಯಕಿ ಹರ್ಮನ್​ ಪ್ರೀತ್​ ಕೌರ್​, ಆರಂಭಿಕ ಬ್ಯಾಟ್ಸ್​ಮನ್​ ಸ್ಮೃತಿ ಮಂದಾನ ಹಾಗೂ ಸ್ಪಿನ್​ ಬೌಲರ್​ ಪೂನಮ್​ ಯಾದವ್​ ಎ ಗ್ರೇಡ್​ ಪಡೆದಿದ್ದಾರೆ. ಇತ್ತೀಚೆಗೆ ಟಿ-20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್​ ಬಿ ಗ್ರೇಡ್​ಗೆ ಹಿಂಬಡ್ತಿ ಪಡೆದಿದ್ದಾರೆ.

ಶಫಾಲಿ ವರ್ಮಾ(ಪ್ರಾತಿನಿಧಿಕ ಚಿತ್ರ)

ಬಿ ಗ್ರೇಡ್​ನಲ್ಲಿ 8 ಆಟಗಾರ್ತಿಯರು ಹಾಗೂ ಸಿ ಗ್ರೇಡ್​ನಲ್ಲಿ 11 ಆಟಗಾರ್ತಿಯರು ಅವಕಾಶ ಪಡೆದಿದ್ದಾರೆ.

ಇನ್ನು ಕೇವಲ 15 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಹರಿಯಾಣದ ಶಫಾಲಿ ವರ್ಮಾ ಮೊದಲ ಬಾರಿಗೆ ಬಿಸಿಸಿಐ ವಾರ್ಷಿಕ ಗುತ್ತಿಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ವಾರ್ಷಿಕ ಗುತ್ತಿಗೆಯಲ್ಲಿರುವ ಆಟಗಾರ್ತಿಯರು:
ಎ ಗ್ರೇಡ್​ (50 ಲಕ್ಷ ರೂ):- ಹರ್ಮನ್​ ಪ್ರೀತ್​ ಕೌರ್​, ಸ್ಮೃತಿ ಮಂದಾನ, ಪೂನಮ್​ ಯಾದವ್​

ಬಿ ಗ್ರೇಡ್​ (30 ಲಕ್ಷ ರೂ):

ಮಿಥಾಲಿ ರಾಜ್​, ಜೂಲಾನ್​ ಗೋಸ್ವಾಮಿ, ಏಕ್ತಾ ಬಿಸ್ತ್​, ರಾಧ ಯಾದವ್​, ಶಿಖಾ ಪಾಂಡೆ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್​​, ತನಿಯಾ ಭಾಟಿಯಾ

ಸಿ ಗ್ರೇಡ್(10 ಲಕ್ಷ ರೂ):

ವೇದಾ ಕೃಷ್ಣಮೂರ್ತಿ, ​ಪೂನಮ್​ ರಾವುತ್​, ಅನುಜಾ ಪಾಟಿಲ್​, ಮಾನ್ಸಿ ಜೋಶಿ, ಡಿ ಹೇಮಲತಾ, ಅರುಂಧತಿ ರೆಡ್ಡಿ, ರಾಜೇಶ್ವರಿ ಗಾಯಕವಾಡ್​, ಪೂಜಾ ವಸ್ತ್ರಾಕರ್​, ಹರ್ಲೀನ್​ ಡಿಯೋಲ್, ಪ್ರಿಯಾ ಪೂನಿಯಾ, ಶಫಾಲಿ ವರ್ಮಾ

Last Updated : Jan 16, 2020, 7:16 PM IST

ABOUT THE AUTHOR

...view details