ನವದೆಹಲಿ :ಭಾರತ ತಂಡದ ದಿಗ್ಗಜ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ತಾವಾಡುತ್ತಿದ್ದ ಕಾಲದ ಸರ್ವಶ್ರೇಷ್ಠ ಬ್ಯಾಟ್ಸ್ಮನ್ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಶಾನ್ ಪೊಲಾಕ್ ತಿಳಿಸಿದ್ದಾರೆ.
ವಿಶ್ವಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾದಂತಹ ಶಾನ್ ಪೊಲಾಕ್, ಸಚಿನ್ ತೆಂಡೂಲ್ಕರ್ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟಿಂಗ್ ನಡೆಸುತ್ತಿದ್ದರು ಎಂದು ಬಣ್ಣಿಸಿದ್ದಾರೆ. ಅವರು ಆಟವನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾರೆ. ಒಮ್ಮೆ ಆಸ್ಟ್ರೇಲಿಯಾಕ್ಕೆ ತೆರಳುವ ಮುನ್ನ ಶಾರ್ಟ್ಪಿಚ್ ಎಸೆತಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನನ್ನ ಜೊತೆ ಮಾತನಾಡಿದ್ದರು. ಆದ್ದರಿಂದಲೇ ಅಂತಹ ಪಿಚ್ಗಳಲ್ಲಿ ಸಚಿನ್ ಸ್ಲಿಪ್ ಹಾಗೂ ವಿಕೆಟ್ ಕೀಪರ್ ತಲೆಯ ಮೇಲೆ ಹಾರಿಸಿ ರನ್ಗಳನ್ನು ಹೇರಳವಾಗಿ ತೆಗೆಯುತ್ತಿದ್ದರು ಎಂದು ಪೊಲಾಕ್ ಸಚಿನ್ ಆಟವನ್ನು ಸ್ಕೈಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ನೆನೆಪಿಸಿಕೊಂಡಿದ್ದಾರೆ.