ಕರಾಚಿ: ಸ್ಪಾಟ್ ಫಿಕ್ಸಿಂಗ್ಗೆ ಒಳಗಾಗಿ ನಿಷೇಧಕ್ಕೆ ಗುರಿಯಾಗಿದ್ದ ಎಡಗೈ ಬ್ಯಾಟ್ಸ್ಮನ್ ಶಾರ್ಜೀಲ್ ಖಾನ್ 4 ವರ್ಷದ ನಂತರ ಪಾಕಿಸ್ತಾನ ತಂಡಕ್ಕೆ ವಾಪಸ್ ಆಗಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಪ್ರವಾಸಕ್ಕೆ ಘೋಷಿಸಿದ ಟಿ20 ತಂಡದಲ್ಲಿ ಅವರು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಎರಡೂ ವರೆ ವರ್ಷ ಕ್ರಿಕೆಟ್ನಿಂದ ದೂರವಿದ್ದ ಶಾರ್ಜೀಲ್ ಖಾನ್, ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರಿಂದ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಅವರು ಈ ವರ್ಷದ ಪಿಎಸ್ಎಲ್ನಲ್ಲಿ ರಿಜ್ವಾನ್ ಮತ್ತು ಬಾಬರ್ ಅಜಮ್ ನಂತರ ಗರಿಷ್ಠ ರನ್ಗಳಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.
" ಹೌದು, ಅವರು (ಶಾರ್ಜೀಲ್) ಈಗಲು ಫಿಟ್ನೆಸ್ಗೆ ಮರಳು ಸಾಕಷ್ಟು ಕೆಲಸ ಮಾಡಬೇಕಿದೆ. ಆದರೆ, ಅವರು ಸಮಯಕ್ಕೆ ತಕ್ಕಂತೆ ಉತ್ತಮರಾಗಲಿದ್ದಾರೆ. ಪ್ರಸ್ತುತ ಅವರು ಬ್ಯಾಟಿಂಗ್ ಮೂಲಕ ಪಾಕಿಸ್ತಾನ ತಂಡಕ್ಕೆ ದೊಡ್ಡ ಪಂದ್ಯಗಳನ್ನು ಗೆದ್ದುಕೊಡಲು ಸಮರ್ಥರಾಗಿದ್ದಾರೆ" ಎಂದು ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸೀಮ್ ಹೇಳಿದ್ದಾರೆ.
ಶಾರ್ಜೀಲ್ ಜೊತೆಗೆ ಅನುಭವಿ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಮತ್ತು ಉಪನಾಯಕ ಶದಾಬ್ ಖಾನ್ ಕೂಡ ತಂಡಕ್ಕೆ ಮರಳಿದ್ದಾರೆ.
ಪಾಕಿಸ್ತಾನ ದಕ್ಷಿಣ ಆಫ್ರಿಕಾ ವಿರುದ್ಧ 4 ಟಿ-20 ಮತ್ತು 3 ಏಕದಿನ ಪಂದ್ಯ ಹಾಗೂ ಜಿಂಬಾಬ್ವೆ ವಿರುದ್ಧ 2 ಟೆಸ್ಟ್, 3 ಟಿ-20 ಪಂದ್ಯಗಳನ್ನಾಡಲಿದೆ. ಏಪ್ರಿಲ್ 2 ರಿಂದ ಏಪ್ರಿಲ್ 16 ರವರೆಗೆ ದ. ಆಫ್ರಿಕಾ ಪ್ರವಾಸ ಮತ್ತು ಏಪ್ರಿಲ್ 17ರಂದು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಮೇ 12 ರಂದು ತವರಿಗೆ ಮರಳಲಿದೆ.