ಹೈದರಾಬಾದ್:ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುತ್ತಿದ್ದ ಆಲ್ರೌಂಡರ್ ಶೇನ್ ವ್ಯಾಟ್ಸನ್ ಇದೀಗ ನಿವೃತ್ತಿ ಪಡೆದುಕೊಂಡಿದ್ದಾರೆ ಎಂಬ ವರದಿ ಎಲ್ಲೆಡೆ ಹರಿದಾಡ್ತಿದೆ.
ಕಳಪೆ ಪ್ರದರ್ಶನ: ಐಪಿಎಲ್ನಿಂದ ವ್ಯಾಟ್ಸನ್ ನಿವೃತ್ತಿ?
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ವ್ಯಾಟ್ಸನ್ ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿಲ್ಲ. ಹೀಗಾಗಿ ಅವರು ಐಪಿಎಲ್ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
2016ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿರುವ ವ್ಯಾಟ್ಸನ್, ಪ್ರಾಂಚೈಸಿಯ ವಿವಿಧ ಟೂರ್ನಿಗಳಲ್ಲಿ ಭಾಗಿಯಾಗುತ್ತಿದ್ದರು. 13ನೇ ಆವೃತ್ತಿಯ ಐಪಿಎಲ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಏನು ಅವರಿಂದ ಮೂಡಿ ಬಂದಿರಲಿಲ್ಲ. ಹೀಗಾಗಿ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅವರು ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಡ್ರೆಸ್ಸಿಂಗ್ ರೂಂನಲ್ಲಿ ಅವರು ನಿವೃತ್ತಿ ಘೋಷಣೆ ಮಾಡ್ತಿದ್ದ ವೇಳೆ ಭಾವುಕರಾಗಿದ್ದರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
2018ರ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸಿಎಸ್ಕೆ ಪರ ಕಣಕ್ಕಿಳಿದಿದ್ದ ವ್ಯಾಟ್ಸನ್ ಕೇವಲ 57 ಎಸೆತಗಳಲ್ಲಿ ಬರೋಬ್ಬರಿ 117 ರನ್ ಗಳಿಸಿ ತಂಡ ಟ್ರೋಫಿ ಗೆಲ್ಲುವಂತೆ ಮಾಡಿದ್ದರು. ಇನ್ನು 2008ರಲ್ಲಿ ಪ್ರಶಸ್ತಿ ಗೆದ್ದ ಆರ್ಆರ್ ತಂಡದಲ್ಲೂ ವ್ಯಾಟ್ಸನ್ ಇದ್ದರು. 39 ವರ್ಷದ ವ್ಯಾಟ್ಸನ್ ಇಲ್ಲಿಯವರೆಗೆ 145 ಪಂದ್ಯಗಳನ್ನಾಡಿದ್ದು, 3,874 ರನ್ಗಳಿಸಿದ್ದು, 92 ವಿಕೆಟ್ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ 59 ಟೆಸ್ಟ್, 190 ಏಕದಿನ ಹಾಗೂ 50 ಟಿ-20 ಪಂದ್ಯಗಳನ್ನಾಡಿದ್ದಾರೆ. ಐಪಿಎಲ್ನಲ್ಲಿ ರಾಜಸ್ಥಾನ, ಆರ್ಸಿಬಿ ಹಾಗೂ ಚೆನ್ನೈ ಪರ ಆಡಿದ್ದಾರೆ.