ಕರ್ನಾಟಕ

karnataka

ETV Bharat / sports

ಸಾಮಾಜಿಕ ಜಾಲತಾಣದಲ್ಲಿ ಅರೆಬೆತ್ತಲೆ ಫೋಟೋ ಶೇರ್​ ಮಾಡಿ ಕಿಡಿಕಾರಿದ ಶಮಿ ಪತ್ನಿ! - ಶಮಿ ಮಾನ ಕಳೆದ ಪತ್ನಿ ಜಹಾನ್​

ಜಹಾನ್ ಈ ಹಿಂದೆ ಶಮಿ ವಿರುದ್ಧ 2018ರಲ್ಲಿ ಕೊಲೆ ಯತ್ಮ ಹಾಗೂ ದೈಹಿಕ ಹಲ್ಲೆ ಆರೋಪ ಮಾಡಿ ದೂರು ದಾಖಲಿಸಿದ್ದರು. ಆದರೆ ಶಮಿ ವಿರುದ್ಧ ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಆದರೆ ಜಹಾನ್​ ಮಾತ್ರ ತಮ್ಮ ಆಕ್ರೋಶವನ್ನು ದಿನದಿಂದ ದಿನಕ್ಕೆ ವಿಭಿನ್ನ ರೀತಿಯಲ್ಲಿ ತೋರುತ್ತಿದ್ದಾರೆ.

ಮೊಹಮ್ಮದ್​ ಶಮಿ ಮತ್ತು ಅವರ ಪತ್ನಿ ಹಸಿನ್​ ಜಹಾನ್​
ಮೊಹಮ್ಮದ್​ ಶಮಿ ಮತ್ತು ಅವರ ಪತ್ನಿ ಹಸಿನ್​ ಜಹಾನ್​

By

Published : Jun 1, 2020, 9:34 PM IST

ಮುಂಬೈ:ಕೆಲವು ದಿನಗಳಿಂದ ಮೊಹಮ್ಮದ್​ ಶಮಿ ಮತ್ತು ಅವರ ಪತ್ನಿ ಹಸಿನ್​ ಜಹಾನ್​ ನಡುವೆ ಸಾಂಸಾರಿಕ ಕಲಹವಿದ್ದು, ಬೇರೆಯಾಗಿ ವಾಸಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಂಡು ಶಮಿ ವಿರುದ್ಧ ಕೆಂಡಕಾರುವ ಹಸಿನ್ ಜಹಾನ್ ಈ ಬಾರಿ ಶಮಿ ವಿರುದ್ಧ ವಿಚಿತ್ರ ರೀತಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಹಸಿನ್ ಜಹಾನ್​ ಶಮಿಯಿಂದ ದೂರವಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅವರಿಗೆ ಹಲವು ಹೆಂಗಸರೊಂದಿಗೆ ಸಂಬಂಧವಿದೆ ಎಂದು ಹಿಂದೊಮ್ಮೆ ಹೇಳಿಕೆ ನೀಡಿದ್ದ ಜಹಾನ್​ ಇದೀಗ ಶಮಿಯೊಂದಿಗೆ ಇರುವ ಅರೆಬೆತ್ತಲೆ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಫೋಟೋ ಜೊತೆಯಲ್ಲಿ ಹಿಂದೆ ‘ನೀನು ಏನು ಆಗಿರದೇ ಇದ್ದ ವೇಳೆ ನಾನು ನಿನಗೆ ಪರಿಶುದ್ಧಳಾಗಿದ್ದೆ. ಈಗ ನೀನು ಒಂದಷ್ಟು ಸಾಧನೆ ಮಾಡಿ ಹೆಸರು ಸಂಪಾದಿಸಿದ ಮೇಲೆ ನಾನು ನಿನ್ನ ಕಣ್ಣಿಗೆ ಅಪವಿತ್ರಳಾಗಿ ಕಾಣಿಸುತ್ತಿದ್ದೇನೆ. ಸುಳ್ಳಿನ ಬುರ್ಖಾದಿಂದ ಸತ್ಯವನ್ನು ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಮೊಸಳೆ ಕಣ್ಣೀರು ಕೆಲ ಸಮಯ ಮಾತ್ರ ಕಾಪಾಡಬಲ್ಲದು. ಈ ಚಿತ್ರದಲ್ಲಿರುವವರು ಮಾಡೆಲ್​ ಜಹಾನ್​ ಹಾಗೂ ಕ್ರಿಕೆಟರ್​ ಮೊಹಮ್ಮದ್​ ಶಮಿ’ ಎಂದು ಜಹಾನ್ ಬರೆದುಕೊಂಡಿದ್ದಾರೆ.

ಜಹಾನ್ ಈ ಹಿಂದೆ ಶಮಿ ವಿರುದ್ಧ 2018ರಲ್ಲಿ ಕೊಲೆ ಯತ್ಮ ಹಾಗೂ ದೈಹಿಕ ಹಲ್ಲೆ ಆರೋಪ ಮಾಡಿ ದೂರು ದಾಖಲಿಸಿದ್ದರು. ಆದರೆ ಶಮಿ ವಿರುದ್ಧ ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ಆದರೆ ಜಹಾನ್​ ಮಾತ್ರ ತಮ್ಮ ಆಕ್ರೋಶವನ್ನು ದಿನದಿಂದ ದಿನಕ್ಕೆ ವಿಭಿನ್ನ ರೀತಿಯಲ್ಲಿ ತೋರುತ್ತಿದ್ದಾರೆ.

ABOUT THE AUTHOR

...view details