ಕರ್ನಾಟಕ

karnataka

ETV Bharat / sports

ನಿಷೇಧಿತ ಕ್ರಿಕೆಟಿಗ ಶಕಿಬ್ ಅಲ್​ ಹಸನ್​ ನೆರವಿಗೆ ನಿಂತ ಬಾಂಗ್ಲಾದೇಶ ಪ್ರಧಾನಿ - ಐಸಿಸಿ ಸುದ್ದಿ

ಐಸಿಸಿ ಶಕಿಬ್​ ನಿಷೇಧ ಮಾಡಿರುವ ವಿಚಾರದಲ್ಲಿ ಸರ್ಕಾರ ಏನು ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಬಿಸಿಬಿ ಅವರ ಬೆನ್ನಿಗೆ ನಿಲ್ಲಬೇಕು ಎಂದು ಪ್ರಧಾನಿ ಶೇಕ್​ ಹಸೀನಾ ​ತಿಳಿಸಿದ್ದಾರೆ.

ಶಕಿಬ್​ ನಿಷೇಧ shakib ban

By

Published : Oct 30, 2019, 1:59 PM IST

ಡಾಕಾ: ಮೂರು ಬಾರಿ ಬುಕ್ಕಿಗಳೊಂದಿಗೆ ಸಂಪರ್ಕ ಸಾಧಿಸಿದ್ದ ವಿಚಾರವನ್ನು ಐಸಿಸಿ ಗಮನಕ್ಕೆ ತರದೇ ಮುಚ್ಚಿಟ್ಟ ಬಾಂಗ್ಲಾದೇಶದ ಸ್ಟಾರ್​ ಆಟಗಾರ ಶಕಿಬ್​ ಅಲ್​ ಹಸನ್ ಪರ ಬಾಂಗ್ಲಾದೇಶ ಪ್ರಧಾನಿ ಶೇಕ್​ ಹಸೀನ ​ಮಾತನಾಡಿದ್ದಾರೆ.

ಬಾಂಗ್ಲಾದೇಶದ ಟೆಸ್ಟ್​ ಹಾಗೂ ಟಿ-20 ತಂಡದ ನಾಯಕ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ವಿಶ್ವದ ನಂಬರ್​ ಒನ್​ ಆಲ್​ರೌಂಡರ್​ ಆಗಿದ್ದ ಶಕಿಬ್​ರನ್ನು 2018ರ ಐಪಿಎಲ್ ವೇಳೆ ಸೇರಿದಂತೆ ಮೂರು ಬಾರಿ ಬುಕ್ಕಿಗಳು ಸಂಪರ್ಕಿಸಿದ್ದರು. ಈ ವಿಚಾರವನ್ನು ಶಕಿಬ್​ ಐಸಿಸಿಯ ಭ್ರಷ್ಟಾಚಾರ ನಿಯಂತ್ರಣ ಮಂಡಳಿಗೆ ತಿಳಿಸದ ಆರೋಪದ ಮೇಲೆ​ ಮಂಗಳವಾರ ಅವರನ್ನು 2 ವರ್ಷದ ಅವಧಿಗೆ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿಷೇಧ ಹೇರಿ ಆದೇಶ ಹೊರಡಿಸಿತ್ತು.

ಇದೀಗ ನಿಷೇದಕ್ಕೊಳಗಾಗಿ ನೋವಿನಲ್ಲಿರುವ ಶಕಿಬ್​ ಪರ ಅಲ್ಲಿನ ಪ್ರಧಾನಿ ಶೇಕ್ ಹಸೀನ ಮಾತನಾಡಿದ್ದು," ಶಕಿಬ್​ ತಪ್ಪು ಮಾಡಿರುವುದು ಸಾಬೀತಾಗಿದೆ. ಅದು ಅವರಿಗೂ ಗೊತ್ತಾಗಿದೆ. ಆದರೆ, ಅವರನ್ನು ದೂಷಿಸದೇ ಅವರು ಕ್ರಿಕೆಟ್​ನಿಂದ ದೂರವಾಗದಂತೆ ಬಿಸಿಬಿ ನೋಡಿಕೊಳ್ಳಬೇಕು" ಎಂದಿದ್ದಾರೆ. ​ ​

ಐಸಿಸಿ ಶಕಿಬ್​ ನಿಷೇಧ ಮಾಡಿರುವ ವಿಚಾರದಲ್ಲಿ ಸರ್ಕಾರ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ಬಿಸಿಬಿ ಅವರ ಬೆನ್ನಿಗೆ ನಿಲ್ಲಬೇಕು ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಬಿ, ಶಕಿಬ್​ ನಿಷೇಧದ ಅವಧಿ ಮುಗಿದ ನಂತರ ಅವರಿಗೆ ನಮ್ಮ ತಂಡದ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಅವರು ಮತ್ತೆ ಬಲಿಷ್ಠರಾಗಿ ಕಮ್​​ ಬ್ಯಾಕ್​ ಮಾಡಲಿದ್ದಾರೆ ಎಂದು ನಾವು ಭಾವಿಸಿದ್ದೇವೆ. ಅವರಿಂದ ಇನ್ನಷ್ಟು ವರ್ಷಗಳ ಕಾಲ ಸೇವೆಯನ್ನು ನಾವು ನಿರೀಕ್ಷೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details