ಕರ್ನಾಟಕ

karnataka

ETV Bharat / sports

ಶ್ರೀಲಂಕಾ ಪ್ರವಾಸದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿಷೇಧಿತ ಶಕಿಬ್​ ಮರಳುವ ಸಾಧ್ಯತೆ - ಶಕಿಬ್ ನಿಷೇಧ

ಶಕಿಬ್​ ಅವರ ನಿಷೇಧದ ಅವಧಿ ಅಕ್ಟೋಬರ್​ 29ಕ್ಕೆ ಕೊನೆಗೊಳ್ಳಲಿದೆ. ಅವರು ಶ್ರೀಲಂಕಾ ವಿರುದ್ಧ ಇನ್ನೂ ವೇಳಾಪಟ್ಟಿ ದೃಢಪಡದ 3 ಪಂದ್ಯಗಳ ಪ್ರಸ್ತಾವಿತ ಟಿ-20 ಸರಣಿಯಲ್ಲಿ ಕಾಣಿಸಿಕೊಳ್ಳಬಹುದು ಎಂದು ತಿಳಿದು ಬಂದಿದೆ.

ಶಕಿಬ್​ ಅಲ್​ ಹಸನ್
ಶಕಿಬ್​ ಅಲ್​ ಹಸನ್

By

Published : Aug 12, 2020, 4:08 PM IST

ಢಾಕಾ:ಭ್ರಷ್ಟಾಚಾರಕ್ಕೆ ಬುಕ್ಕಿಗಳಿಂದ ಬಂದಿದ್ದ ಕರೆಯನ್ನು ಐಸಿಸಿಗೆ ವರದಿ ಮಾಡದೆ ಮುಚ್ಚಿಟ್ಟಿದ್ದರಿಂದ ಒಂದು ವರ್ಷ ನಿಷೇಧಕ್ಕೆ ಒಳಗಾಗಿರುವ ಬಾಂಗ್ಲಾದೇಶದ ಆಲ್​ರೌಂಡರ್​ ಶಕಿಬ್​ ಅಲ್​ ಹಸನ್ ವರ್ಷದ ಕೊನೆಯಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳುವ ಬಾಂಗ್ಲಾ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಶಕಿಬ್​ ಅವರ ನಿಷೇಧದ ಅವಧಿ ಅಕ್ಟೋಬರ್​ 29ಕ್ಕೆ ಕೊನೆಗೊಳ್ಳಲಿದೆ. ಅವರು ಶ್ರೀಲಂಕಾ ವಿರುದ್ಧ ಇನ್ನೂ ವೇಳಾಪಟ್ಟಿ ದೃಢಪಡದ 3 ಪಂದ್ಯಗಳ ಪ್ರಸ್ತಾವಿತ ಟಿ-20 ಸರಣಿಯಲ್ಲಿ ಕಾಣಿಸಿಕೊಳ್ಳಬಹುದು ಎಂದು ತಿಳಿದು ಬಂದಿದೆ.

ರಸೆಲ್​ ಡೊಮಿಂಗೊ

ಇಂಡಿಯನ್​ ಪ್ರೀಮಿಯರ್​ ಲೀಗ್​ ವೇಳೆ ಭಾರತೀಯ ಬುಕ್ಕಿಯೊಬ್ಬ ಮ್ಯಾಚ್​ ಫಿಕ್ಸಿಂಗ್​ಗಾಗಿ ಸಂಪರ್ಕಿಸಿದ್ದ ವಿಷಯವನ್ನು ಶಕಿಬ್​ ವರದಿ ಮಾಡುವಲ್ಲಿ ವಿಫಲರಾದ ಹಿನ್ನೆಲೆ ಅವರನ್ನು 2 ವರ್ಷಗಳ ಕಾಲ ನಿಷೇಧ ಮಾಡಲಾಗಿತ್ತು. ಅದರಲ್ಲಿ ಅವರು ವಿಚಾರಣೆಗೆ ಬೆಂಬಲ ನೀಡಿದ್ದರಿಂದ ಒಂದು ವರ್ಷದ ಶಿಕ್ಷೆಯನ್ನು ಕಡಿತಗೊಳಿಸಲಾಗಿತ್ತು.

ಶಕಿಬ್​ ಒಂದು ವರ್ಷದಿಂದ ಹೊರಗುಳಿದಿರುವುದು ಆರು ಆಥವಾ ಏಳು ತಿಂಗಳ ಕಾಲ ಕೋವಿಡ್-19ನಿಂದ ಹೊರಗುಳಿದಿರುವ ಉಳಿದ ಆಟಗಾರರಿಗಿಂತ ಹೆಚ್ಚು ಭಿನ್ನವಾಗಿಲ್ಲ ಎಂದು ಬಾಂಗ್ಲಾ ತಂಡದ ಮುಖ್ಯ ಕೋಚ್​ ರಸೆಲ್​ ಡೊಮಿಂಗೊ ಹೇಳಿದ್ದಾರೆ. ಎಲ್ಲಾ ಆಟಗಾರರು ಫಿಟ್​ ಆಗಿದ್ದಾರೆಂದು ನಾವು ಭಾವಿಸುತ್ತೇವೆ. ನಿಸ್ಸಂಶಯವಾಗಿ ಎಲ್ಲಾ ಆಟಗಾರರು ಫಿಟ್​ನೆಸ್​ ಮಟ್ಟಕ್ಕೆ ಸಂಬಂಧಿಸಿದಂತೆ ಕೆಲವು ಮಾನದಂಡಗಳಿಗೆ ಒಳಗಾಗಬೇಕಿದೆ ಎಂದು ತಿಳಿಸಿದ್ದಾರೆ.

ಯಾವುದೇ ವಿಧದ ಕ್ರಿಕೆಟ್​ ಆಟದೆ ನೇರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳುವುದು ಕಷ್ಟಕರವಾಗಿದೆ. ನನ್ನ ಪ್ರಕಾರ ಶಕಿಬ್​ಗೆ ಕೆಲವು ಪಂದ್ಯಗಳಲ್ಲಿ ಆಡುವ ಅವಕಾಶಗಳನ್ನು ಮಾಡಿಕೊಡಬೇಕಿದೆ. ಆತ ವಿಶ್ವದರ್ಜೆಯ ಆಟಗಾರ. ತಂಡಕ್ಕೆ ಆದಷ್ಟು ಬೇಗ ಮರಳಲಿದ್ದಾರೆ ಎಂಬುದನ್ನು ನಾನು ಖಾತ್ರಿಪಡಿಸುತ್ತೇನೆ. ಆದರೆ ಇದೆಲ್ಲಾ ಸಾಧ್ಯವಾಗಬೇಕೆಂದರೆ ಫಿಟ್​ನೆಸ್​ ಬಹಳ ಮುಖ್ಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಸೆಪ್ಟೆಂಬರ್​ 24ರಂದು ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಟೆಸ್ಟ್​ ಸರಣಿಗಾಗಿ ಮಾತುಕತೆ ನಡೆಸಲಿವೆ ಎಂದು ತಿಳಿದು ಬಂದಿದೆ. ಆದರೆ ಎರಡು ಅಥವಾ ಮೂರು ಪಂದ್ಯಗಳ ಟೆಸ್ಟ್​ ಸರಣಿ ಅಯೋಜಿಸಬೇಕೇ ಎಂಬುದು ಇನ್ನೂ ಚರ್ಚೆಯಲ್ಲಿದೆ. ಆದರೆ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ಟೆಸ್ಟ್​ ಸರಣಿಯ ನಂತರ 3 ಪಂದ್ಯಗಳ ಟಿ-20 ಸರಣಿಯನ್ನು ಪ್ರವಾಸದಲ್ಲಿ ಸೇರಿಸಿಕೊಳ್ಳುವಂತೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details