ಕರ್ನಾಟಕ

karnataka

ETV Bharat / sports

ಪಿಎಸ್​ಎಲ್ ವೇಳೆ ಅಪಾಯಕ್ಕೆ ದೂಡುವ ಹೆಲ್ಮೆಟ್​ ಧರಿಸಿ ಬ್ಯಾಟಿಂಗ್ ಮಾಡಿದ ಶಾಹೀದ್ ಆಫ್ರಿದಿ

ಗ್ರಿಲ್ ಕಡಿಮೆಯಿರುವುದರಿಂದ ಚೆಂಡು ಹೆಲ್ಮೆಟ್​ ಒಳಗೆ ನುಗ್ಗುವ ಸಾಧ್ಯತೆ ಕೂಡ ಇದೆ ಎಂದು ತಿಳಿದು ಬಂದಿದೆ. ಶನಿವಾರ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಆಫ್ರಿದಿ ಮುಲ್ತಾನ್ ಸುಲ್ತಾನ್​ ತಂಡದ ಪರ ಆಡಿದ್ದು, ಕೇವಲ 12 ಎಸೆತಗಳಲ್ಲಿ 12 ರನ್​ಗಳಿಸಿ ಔಟಾದರು..

ಶಾಹೀದ್ ಅಫ್ರಿದಿ
ಶಾಹೀದ್ ಅಫ್ರಿದಿ

By

Published : Nov 15, 2020, 10:09 PM IST

ಕರಾಚಿ :ಪಾಕಿಸ್ತಾನದ ಮಾಜಿ ಆಲ್​ರೌಂಡರ್​ ಶಾಹೀದ್ ಆಫ್ರಿದಿ ಪಾಕಿಸ್ತಾನ್​ ಸೂಪರ್​ ಲೀಗ್ ವೇಳೆ ಅಪಾಯಕಾರಿಯಾಗಿ ಕಾಣುವ ಹೆಲ್ಮೆಟ್​ ಧರಿಸಿ ಬ್ಯಾಟಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ವರ್ಷಗಳು ಉರುಳಿದಂತೆ ಕ್ರಿಕೆಟಿಗರ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್​ಗಳ ವಿಕಸನವೇ ನಡಿದಿದೆ. ಬ್ಯಾಟ್ಸ್​ಮನ್​ಗಳ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಪ್ರಸ್ತುತ ಹೆಲ್ಮೆಟ್​ಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಅದರಲ್ಲೂ ಸಚಿನ್​ ತೆಂಡೂಲ್ಕರ್​ ಅಂತಹ ಮಹಾನ್ ಕ್ರಿಕೆಟಿಗರೇ ಸ್ಪಿನ್​ ಬೌಲಿಂಗ್​ಗೆ ಬ್ಯಾಟಿಂಗ್ ಮಾಡುವಾಗಲೂ ಕೂಡ ಹೆಲ್ಮೆಟ್​ ಕಡ್ಡಾಯಗೊಳಿಸಬೇಕೆಂದು ಐಸಿಸಿಗೆ ಮನವಿ ಸಲ್ಲಿಸಿದ್ದಾರೆ.

ಆದರೆ, ಪಿಎಸ್​ಎಲ್​ ವೇಳೆ ಶಾಹೀದ್ ಆಫ್ರಿದಿ ಸುರಕ್ಷತೆಯಿಲ್ಲ ಹೆಲ್ಮೆಟ್​ ಬಳಿಸಿದ್ದಾರೆ. ಆ ಹೆಲ್ಮೆಟ್​ನಲ್ಲಿ ಹಣೆ ಮತ್ತು ಕಣ್ಣಿನ ಭಾಗದಲ್ಲಿ ಗ್ರಿಲ್​ ಅನ್ನು ಸಂಪೂರ್ಣ ತೆಗೆಯಲಾಗಿದೆ. ಇದು ನೋಡುಗರಿಗೆ ಅಪಾಯಕಾರಿಯಂತೆ ಕಾಣುತ್ತದೆ. ಆ ಹೆಲ್ಮೆಟ್​ ಬ್ಯಾಟ್ಸ್​ಮನ್​ಗೆ ಗಂಭೀರ ಡ್ಯಾಮೇಜ್ ಮಾಡುವಂತಿದೆ.

ಗ್ರಿಲ್ ಕಡಿಮೆಯಿರುವುದರಿಂದ ಚೆಂಡು ಹೆಲ್ಮೆಟ್​ ಒಳಗೆ ನುಗ್ಗುವ ಸಾಧ್ಯತೆ ಕೂಡ ಇದೆ ಎಂದು ತಿಳಿದು ಬಂದಿದೆ. ಶನಿವಾರ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಆಫ್ರಿದಿ ಮುಲ್ತಾನ್ ಸುಲ್ತಾನ್​ ತಂಡದ ಪರ ಆಡಿದ್ದು, ಕೇವಲ 12 ಎಸೆತಗಳಲ್ಲಿ 12 ರನ್​ಗಳಿಸಿ ಔಟಾದರು.

ABOUT THE AUTHOR

...view details