ಕರ್ನಾಟಕ

karnataka

ETV Bharat / sports

'ಸಚಿನ್​ ಬ್ಯಾಟ್​ ಬಳಸಿಕೊಂಡು 37 ಎಸೆತಕ್ಕೆ ಶತಕ ಸಿಡಿಸಿದ್ರಂತೆ ಅಫ್ರಿದಿ' - ಅಜರ್​ ಮಹಮೂದ್​

ಕೀನ್ಯಾ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳ ಒಳಗೊಂಡ 1996 ಕೆಸಿಎ ಸೆಂಟನರಿ ಟೂರ್ನಮೆಂಟ್ ಜಿಂಬಾಬ್ವೆಯ ನೈರೋಬಿಯಲ್ಲಿ ಆಯೋಜನೆಗೊಂಡಿತ್ತು. ಆ ಸರಣಿಯಲ್ಲಿ ವೃತ್ತಿ ಜೀವನದಲ್ಲಿ 2ನೇ ಪಂದ್ಯವನ್ನಾಡಿದ್ದ ಅಫ್ರಿದಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ವೇಗದ ಶತಕ ಬಾರಿಸಿದ್ದರು.

ಸಚಿನ್​ ಬ್ಯಾಟ್​ನಲ್ಲಿ ಶಾಹೀದ್​ ಅಫ್ರಿದಿ ಶತಕ
ಸಚಿನ್​ ಬ್ಯಾಟ್​ನಲ್ಲಿ ಶಾಹೀದ್​ ಅಫ್ರಿದಿ ಶತಕ

By

Published : Aug 3, 2020, 2:21 PM IST

ನವದೆಹಲಿ:ಕ್ರಿಕೆಟ್​ಗೆ ಪದಾರ್ಪಣ ಮಾಡಿದ್ದ ಎರಡನೇ ಪಂದ್ಯದಲ್ಲೇ ಶಾಹೀದ್​ ಅಫ್ರಿದಿ ಏಕದಿನ ಕ್ರಿಕೆಟ್​ ಇತಿಹಾಸದಲ್ಲೇ ವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಆದರೆ ಅಂದು ಅವರು ಉಪಯೋಗಿಸಿದ್ದ ಬ್ಯಾಟ್​ ಭಾರತ ಕ್ರಿಕೆಟ್​ನ ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ಅವರದ್ದು ಎಂದು ಮಾಜಿ ಪಾಕಿಸ್ತಾನ ಕ್ರಿಕೆಟರ್​ ಅಹರ್​ ಮಹಮೂದ್​ ನೆನಪಿಸಿಕೊಂಡಿದ್ದಾರೆ.

"ಆ ನಾಲ್ಕು ತಂಡಗಳ ಸರಣಿಗೆ ಅಫ್ರಿದಿ ಮೊದಲಿಗೆ ಆಯ್ಕೆಯಾಗಿರಲಿಲ್ಲ. ಆದರೆ, ಪ್ರಮುಖ ಸ್ಪಿನ್ನರ್​ ಮುಷ್ತಾಕ್​ ಅಹ್ಮದ್​ ಅವರು ಗಾಯಕ್ಕೊಳಗಾಗಿದ್ದರಿಂದ ಅಫ್ರಿದಿಗೆ ಅದೃಷ್ಟ ಹೊಲಿದು ಬಂದಿತ್ತು" ಎಂದು ಮಹಮೂದ್​ ಬಹಿರಂಗಪಡಿಸಿದ್ದಾರೆ.

ಶಾಹೀದ್​ ಅಫ್ರಿದಿ 1996ರ ನೈರೋಬಿಯಲ್ಲಿ ನಡೆದಿದ್ದ ಸಹರಾ ಕಪ್​ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣ ಮಾಡಿದ್ದರು. ಅದೇ ಸರಣಿಯಲ್ಲಿ ನಾನು ಪದಾರ್ಪಣ ಮಾಡಿದ್ದೆ ಎಂದು ಪೋಡ್​ಕಾಸ್ಟ್​ವೊಂದರಲ್ಲಿ ಹೇಳಿದ್ದಾರೆ." ಮುಷಿ(ಮುಷ್ತಾಕ್​ ಅಹ್ಮದ್​) ಗಾಯಕ್ಕೊಳಗಾದರು ಅದೇ ಸಂದರ್ಭದಲ್ಲಿ ಪಾಕಿಸ್ತಾನ ಎ ತಂಡದಲ್ಲಿ ವಿಂಡೀಸ್​ಗೆ ಅಫ್ರಿದಿ ಪಯಣಿಸಿದ್ದರು. ಆದ್ದರಿಂದ ಮುಷಿ ಬದಲಿಗೆ ಅವರು ಅವಕಾಶ ಗಿಟ್ಟಿಸಿಕೊಂಡಿದ್ದರು.

ಶಾಹೀದ್ ಅಫ್ರಿದಿ ಶತಕ

ಇನ್ನು ಇದೇ ಸಂದರ್ಭದಲ್ಲಿ ಕೀನ್ಯಾ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳ ಒಳಗೊಂಡ 1996 ಕೆಸಿಎ ಸೆಂಟನರಿ ಟೂರ್ನಮೆಂಟ್ ಜಿಂಬಾಬ್ವೆಯ ನೈರೋಬಿಯಲ್ಲಿ ಆಯೋಜನೆ ಗೊಂಡಿತ್ತು. ಆ ಸರಣಿಯಲ್ಲಿ ವೃತ್ತಿ ಜೀವನದಲ್ಲಿ 2ನೇ ಪಂದ್ಯವನ್ನಾಡಿದ್ದ ಅಫ್ರಿದಿ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿ ವೇಗದ ಶತಕ ಬಾರಿಸಿದ್ದರು.

ಸಚಿನ್​ ತೆಂಡೂಲ್ಕರ್​ ತಮ್ಮ ಬ್ಯಾಟ್​ ಅನ್ನು ಪಾಕಿಸ್ತಾನ ಲೆಜೆಂಡರಿ ಬೌಲರ್​ ವಾಸಿಮ್ ಅಕ್ರಮ್​ಗೆ ನೀಡಿದ್ದರು. ಅಫ್ರಿದಿ ಆ ಬ್ಯಾಟ್​ ಬಳಸಿ ಸ್ಫೋಟಕ ಶತಕ ಸಿಡಿಸಿದ್ದರು. ಅಲ್ಲಿಯವರೆಗೆ ಬೌಲರ್​ ಎನಿಸಿಕೊಂಡಿದ್ದ ಅಫ್ರಿದಿ ಬ್ಯಾಟ್ಸ್​ಮನ್​ ಆಗಿ ಬದಲಾದರು. ನಂತರ ಅವರು ಅದ್ಭುತ ವೃತ್ತಿ ಜೀವನವನ್ನು ಕಂಡುಕೊಂಡರು ಎಂದು ಮಹಮೂದ್​ ಈ ವೇಳೆ ನೆನಪಿಸಿಕೊಂಡಿದ್ದಾರೆ.

ABOUT THE AUTHOR

...view details