ಇಸ್ಲಾಮಾಬಾದ್: ಪಾಕ್ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಮಹಾಮಾರಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ಕಳೆದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದೇನೆ. ಕೋವಿಡ್-19 ಟೆಸ್ಟ್ಗೆ ಒಳಗಾಗಿದ್ದು ಪಾಸಿಟಿವ್ ವರದಿ ಬಂದಿದೆ. ಆದಷ್ಟು ಬೇಗ ಚೇತರಿಸಿಕೊಳ್ಳುವ ವಿಶ್ವಾಸ ಹೊಂದಿರುವೆ ಎಂದು ಅವರು ತಿಳಿಸಿದ್ದಾರೆ.
ಪಾಕ್ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಆಗಿರುವ ಅಫ್ರಿದಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಕ್ ಕ್ರಿಕೆಟರ್‌ಗಳಾದ ಉಮರ್, ಜಾಫರ್ ಸರ್ಪರಾಜ್ಗೂ ಕೊರೊನಾ ಬಾಧಿಸಿದ್ದು ಅವರು ಚೇತರಿಸಿಕೊಂಡಿದ್ದಾರೆ.
ಕೊರೊನಾ ವೈರಸ್ ಅಬ್ಬರದ ವೇಳೆ ಅಫ್ರಿದಿ ತಮ್ಮ ಸ್ವಂತ ಫೌಂಡೇಷನ್ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರು. ಪಾಕ್‌ನಲ್ಲಿ ಸದ್ಯ 1,25,933 ಕೋವಿಡ್ ಪ್ರಕರಣಗಳಿದ್ದು 2,463 ಜನರು ಸಾವನ್ನಪ್ಪಿದ್ದಾರೆ.