ಸೆಂಚುರಿಯನ್: ಬುಧವಾರ ಅಂತ್ಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನ 2-1ರಲ್ಲಿ ಬಗ್ಗುಬಡಿದಿದೆ. ಈ ಸಂದರ್ಭದಲ್ಲಿ ಪಾಕ್ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಮಾಜಿ ಆಲ್ರೌಂಡರ್ ಶಾಹೀದ್ ಅಫ್ರಿದಿ ಐಪಿಲ್ಗಾಗಿ ತಂಡ ತೊರೆದ ದ.ಆಫ್ರಿಕಾ ಆಟಗಾರರ ವಿರುದ್ಧ ಕಿಡಿಕಾರಿದ್ದಾರೆ.
ಬುಧವಾರ ಸರಣಿ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆಫ್ರಿಕಾ ತಂಡದ ಸ್ಟಾರ್ ಆಟಗಾರರಾದ ಕ್ವಿಂಟನ್ ಡಿ ಕಾಕ್, ಕಗಿಸೊ ರಬಾಡ ಮತ್ತು ಅನ್ರಿಚ್ ನೋಕಿಯಾ, ಡೇವಿಡ್ ಮಿಲ್ಲರ್ ಹಾಗೂ ಲುಂಗಿ ಎಂಗಿಡಿಯನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಐಪಿಎಲ್ಗಾಗಿ ಬಿಡುಗಡೆ ಮಾಡಿತ್ತು. ಅಲ್ಲದೇ ಈ ಆಟಗಾರರು ಮುಂಬರುವ ಟಿ20 ಸರಣಿಗೂ ಪರಿಗಣಿಸಲಾಗಿಲ್ಲ. ಪರಿಣಾಮ ಸರಣಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಹರಿಣ ಪಡೆ 28ರನ್ಗಳಿಂದ ಸೋಲು ಕಂಡಿತ್ತು. ಈ ಕಾರಣದಿಂದ ಅಫ್ರಿದಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯನ್ನು ದೂಷಿಸಿದ್ದಾರೆ.