ಡಾಕಾ:ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನೆರವು ನೀಡಲು ಬಾಂಗ್ಲಾದೇಶದ ವಿಕೆಟ್ ಕೀಪರ್ ಮುಶ್ಪಿಕರ್ ರಹೀಮ್ ಹರಾಜಿಗಿಟ್ಟಿದ್ದ ಬ್ಯಾಟ್ಅನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಖರೀದಿಸಿದ್ದಾರೆ.
2013ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ನಲ್ಲಿ ದ್ವಿಶತಕ ಸಿಡಿಸಿದ್ದ ತಮ್ಮ ನೆಚ್ಚಿನ ಬ್ಯಾಟ್ಅನ್ನು ರಹೀಮ್ ಬಾಂಗ್ಲಾದೇಶದಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ ನೆರವು ನೀಡವ ಸಲುವಾಗಿ ಹರಾಜಿಗಿಟ್ಟಿದ್ದರು. ಈ ವೇಳೆ ಸುಳ್ಳು ಬಿಡ್ ಮಾಡಿ ಈ ಹರಾಜು ಅರ್ಧದಲ್ಲೇ ನಿಂತಿತ್ತು. ಇದೀಗ ಅಫ್ರಿದಿ ತಮ್ಮ ಶಾಹೀದ್ ಅಫ್ರಿದಿ ಫೌಂಡೇಶನ್ ಮೂಲಕ 20000 ಅಮೆರಿಕನ್ ಡಾಲರ್(16.9 ಲಕ್ಷ ಬಾಂಗ್ಲಾ ಟಾಕಾ) ನೀಡಿ ಖರೀದಿಸಿದ್ದಾರೆ.