ಕರ್ನಾಟಕ

karnataka

ETV Bharat / sports

ಶ್ರೀಲಂಕಾ ಆಟಗಾರರು ಪಾಕ್​​​​ಗೆ ಬರದಿರಲು ಐಪಿಎಲ್ ಕಾರಣ.. ಭಾರತವನ್ನ ದೂಷಿಸಿದ ಪಾಕ್ ಆಟಗಾರ! - ಪಾಕಿಸ್ತಾನ

ಇಂಡಿಯನ್ ಪ್ರೀಮಿಯರ್​ ಲೀಗ್ ಫ್ರಾಂಚೈಸಿ​ಗಳ ಬೆದರಿಕೆಯಿಂದ ಲಂಕಾ ಆಟಗಾರರು ಪಾಕಿಸ್ತಾನಕ್ಕೆ ಬರುತ್ತಿಲ್ಲ ಎಂದು ಅಫ್ರಿದಿ ಆರೋಪಿಸಿದ್ದಾರೆ.

ಭಾರತವನ್ನ ದೂಷಿಸಿದ ಪಾಕ್ ಆಟಗಾರ

By

Published : Sep 20, 2019, 12:55 PM IST

ಇಸ್ಲಾಮಾಬಾದ್: ಶ್ರೀಲಂಕಾ ಆಟಗಾರರು ಪಾಕ್​ ಪ್ರವಾಸವನ್ನ ಕೈಗೊಳ್ಳುವುದಿಲ್ಲ ಎಂದು ಹೇಳುತ್ತಿರುವ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕ್ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅಫ್ರಿದಿ, ನಾನು ಶ್ರೀಲಂಕಾ ಅಟಗಾರರೊಂದಿಗೆ ಮಾತನಾಡಿದ್ದೇನೆ. ಪಾಕಿಸ್ತಾನಕ್ಕೆ ಬಂದು ಪಿ​ಎಸ್​ಎಲ್​ನಲ್ಲಿ ಭಾಗವಹಿಸುವಂತೆ ಕೇಳಿದ್ದೆ. ಆದರೆ, ಅವರು ಹೇಳುವ ಪ್ರಕಾರ ಇಂಡಿಯನ್ ಪ್ರೀಮಿಯರ್​ ಲೀಗ್ ಫ್ರಾಂಚೈಸಿಗಳು ಪಾಕಿಸ್ತಾನಕ್ಕೆ ಹೋದರೆ ನಿಮ್ಮ ಕಾಂಟ್ರಾಕ್ಟ್​ಗಳನ್ನ ಸ್ಥಗಿತಗೊಳಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಹೀಗಾಗಿ ಪಾಕ್​ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಅಂತ ಅಫ್ರಿದಿ ಆರೋಪಿಸಿದ್ದಾರೆ.

ಲಂಕಾ ಕ್ರಿಕೆಟ್ ಬೋರ್ಡ್​ ತಮ್ಮ ಆಟಗಾರರ ಮೇಲೆ ಒತ್ತಡ ಹೇರಿ ಅವರನ್ನ ಪಾಕಿಸ್ತಾನಕ್ಕೆ ಕಳುಹಿಸಬೇಕು. ಇಲ್ಲಿಗೆ ಬಂದು ಕ್ರಿಕೆಟ್ ಆಡುವ ಆಟಗಾರರು ಪಾಕಿಸ್ತಾನದ ಇತಿಹಾಸದಲ್ಲಿ ಉಳಿಯಲಿದ್ದಾರೆ ಎಂದಿದ್ದಾರೆ.

ಪಾಕಿಸ್ತಾನ ಪ್ರವಾಸದ ವೇಳೆ ಲಂಕಾ ಆಟಗಾರರ ಮೇಲೆ ಉಗ್ರದಾಳಿ ನಡೆಯಲಿದೆ ಎನ್ನುವ ಗುಪ್ತಚರ ಇಲಾಖೆಯ ಮಾಹಿತಿಯನ್ನು ಲಂಕಾ ಪ್ರಧಾನಿ ಕಚೇರಿ ಪಡೆದುಕೊಂಡಿದೆ. ಹೀಗಾಗಿ ಲಂಕಾ ತಂಡದ ಕೆಲ ಆಟಗಾರರು ಪಾಕ್​ ಪ್ರವಾಸದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ.

ABOUT THE AUTHOR

...view details