ಚೆನ್ನೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಾಗಿ ಚೆನ್ನೈನಲ್ಲಿಂದು ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲ ಪ್ರಾಂಚೈಸಿಗಳು ಇದರಲ್ಲಿ ಭಾಗಿಯಾಗಿ ತಮಗೆ ಇಷ್ಟವಾಗುವ ಪ್ಲೇಯರ್ ಖರೀದಿ ಮಾಡ್ತಿವೆ. ಇದರ ಮಧ್ಯೆ ಕೆಲ ಪ್ರಾಂಚೈಸಿ ಮಕ್ಕಳು ಗಮನ ಸೆಳೆಯುತ್ತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರೂಖ್ ಖಾನ್ ಮಗ ಆರ್ಯನ್ ಹಾಗೂ ಬಾಲಿವುಡ್ ನಟಿ ಜೂಹಿ ಚಾವ್ಲಾ ಮಗಳು ಜಾನ್ವಿ ಮೆಹ್ತಾ ಗಮನ ಸೆಳೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡಾಗಿನಿಂದಲೂ ತಂದೆ ಜತೆ ಪಂದ್ಯ ವೀಕ್ಷಣೆ ಮಾಡಲು ಹೋಗ್ತಿದ್ದ ಆರ್ಯನ್ ಇದೇ ಮೊದಲ ಸಲ ಬಿಡ್ಡಿಂಗ್ನಲ್ಲಿ ಪ್ರಾಂಚೈಸಿ ಪರ ಭಾಗಿಯಾಗಿದ್ದಾರೆ.