ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್​ ಆಡಲಿರುವ 15ರ ಪೋರಿ... ಹೊಸ ದಾಖಲೆ ಬರೆಯಲು ಶೆಫಾಲಿ ಸಜ್ಜು! - ಟಿ-20 ವಿಶ್ವಕಪ್​ ಆಡಲಿರುವ 15ರ ಪೋರಿ

ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಮಹಿಳಾ ಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮಿಂಚಲು 15ರ ಪೋರಿ ಸಜ್ಜುಗೊಂಡಿದ್ದಾರೆ.

Shafali Verma
ಟಿ-20 ವಿಶ್ವಕಪ್​ ಆಡಲಿರುವ 15ರ ಪೋರಿ

By

Published : Jan 15, 2020, 10:35 PM IST

ನವದೆಹಲಿ:ಈಗಾಗಲೇ ಟೀಂ ಇಂಡಿಯಾ ಪರ 15ನೇ ವರ್ಷದಲ್ಲಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಶೆಫಾಲಿ ವರ್ಮಾ ಸದ್ಯ ಟಿ-20 ವಿಶ್ವಕಪ್​ಗಾಗಿ ಪ್ರಕಟಗೊಂಡಿರುವ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಪಂದ್ಯದಲ್ಲಿ ಈಗಾಗಲೇ ತಮ್ಮ ಕೈಚಳಕ ತೋರಿಸಿರುವ ಈ ಆಟಗಾರ್ತಿ ಕೇವಲ 49 ಎಸೆತಗಳಲ್ಲಿ 73ರನ್​ಗಳಿಕೆ ಮಾಡಿ ಸಚಿನ್​ ಹೆಸರಿನಲ್ಲಿದ್ದ 30 ವರ್ಷದ ದಾಖಲೆ ಬ್ರೇಕ್​​ ಮಾಡಿದ್ದರು.

ಇದೀಗ ಫೆಬ್ರವರಿ 8,2020ರಿಂದ ಆರಂಭಗೊಳ್ಳಲಿರುವ ಟಿ-20 ವಿಶ್ವಕಪ್​​ನಲ್ಲಿ ಶೆಫಾಲಿ ಭಾಗಿಯಾಗಲಿದ್ದು, ಹರ್ಮನ್​ಪ್ರೀತ್​ ಸಿಂಗ್​ ಬಳಗದ ಟೀಂ ಇಂಡಿಯಾ ಮಹಿಳಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭವಿಷ್ಯದ ಭಾರತ ಮಹಿಳಾ ಕ್ರಿಕೆಟ್ ತಂಡದ ತಾರೆಯಾಗಿ ಹೊರಹೊಮ್ಮಿರುವ ಹರಿಯಾಣ ಮೂಲದ 15 ವರ್ಷದ ಶಾಲಾ ಬಾಲಕಿ ಶಫಾಲಿ ವರ್ಮಾ, ಚೊಚ್ಚಲ ಅಂತರಾಷ್ಟ್ರೀಯ ವಿಶ್ವಕಪ್ ಟೂರ್ನಿ ಆಡಲಿದ್ದಾರೆ. ಇಲ್ಲಿಯವರೆಗೂ ಭಾರತದ ಪರ 9 ಟಿ-20 ಪಂದ್ಯಗಳನ್ನು ಆಡಿರುವ ಶಫಾಲಿ ವರ್ಮಾ 222 ರನ್ ಸಿಡಿಸಿದ್ದಾರೆ.

ಟಿ-20 ವಿಶ್ವಕಪ್ ತಂಡ:ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನಾ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ವೇದ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ, ಪೂನಂ ಯಾದವ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್‌, ಶಿಖಾ ಪಾಂಡೆ, ಪೂಜಾ ವಸ್ತ್ರಕಾರ್‌, ಅರುಂಧತಿ ರೆಡ್ಡಿ.

ABOUT THE AUTHOR

...view details