ದುಬೈ: ಭಾರತದ ಯುವ ಬ್ಯಾಟರ್ ಶೆಫಾಲಿ ವರ್ಮಾ ಐಸಿಸಿ ಮಂಗಳವಾರ ಬಿಡುಗಡೆ ಮಾಡಿರುವ ನೂತನ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡು 2ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
744 ಅಂಕಗಳನ್ನು ಹೊಂದಿರುವ ಶೆಫಾಲಿ 2ನೇ ಸ್ಥಾನದಲ್ಲಿದ್ದರೆ, ಇವರಿಗಿಂತ 4 ಅಂಕ ಹೆಚ್ಚು ಹೊಂದಿರುವ ಆಸ್ಟ್ರೇಲಿಯಾದ ಬೆತ್ ಮೂನಿ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಮತ್ತೊಬ್ಬ ಸ್ಟಾರ್ ಬ್ಯಾಟರ್ ಸ್ಮೃತಿ ಮಂದಾನ 693 ಅಂಕ ಹೊಂದಿದ್ದು 7ನೇ ಸ್ಥಾನದಲ್ಲಿದ್ದಾರೆ. ಜಮೀಮಾ ರೋಡ್ರಿಗಸ್(9) ಟಾಪ್ 10 ರಲ್ಲಿರುವ ಮತ್ತೊಬ್ಬ ಭಾರತೀಯರಾಗಿದ್ದಾರೆ.