ಕರ್ನಾಟಕ

karnataka

ETV Bharat / sports

ಟಿ-20 ಕ್ರಿಕಟ್​ನಲ್ಲಿ ದಕ್ಷಿಣ ಆಫ್ರಿಕಾ ಪರ 100 ವಿಕೆಟ್ ಮೊದಲ ಕ್ರಿಕೆಟರ್ ಶಬ್ನಿಮ್ ಇಸ್ನಾಯಿಲ್

ವೆಸ್ಟ್ ಇಂಡೀಸ್ ತಂಡದ ಅನಿಸಾ ಮೊಹಮ್ಮದ್ ಟಿ-20 ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಬೌಲರ್​ ಎನಿಸಿಕೊಂಡಿದ್ದಾರೆ. ಅವರು 120 ವಿಕೆಟ್ ಪಡೆದಿದ್ದಾರೆ. 2ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಆಲ್​ರೌಂಡರ್​ ಎಲಿಸ್ ಪೆರ್ರಿ 114 ವಿಕೆಟ್​ ಪಡೆದಿದ್ದಾರೆ. ಇಂಗ್ಲೆಂಡ್​ ತಂಡದ ಆ್ಯನಿ ಶ್ರುಬ್​ಸೋಲ್ 101 ವಿಕೆಟ್ ಪಡೆದಿದ್ದಾರೆ.

By

Published : Jan 30, 2021, 7:32 PM IST

ಶಬ್ನಿಮ್ ಇಸ್ನಾಯಿಲ್
ಶಬ್ನಿಮ್ ಇಸ್ನಾಯಿಲ್

ಡರ್ಬನ್​: ವೇಗದ ಬೌಲರ್​ ಶಬ್ನಿಮ್ ಇಸ್ನಾಯಿಲ್ ಟಿ-20 ಕ್ರಿಕೆಟ್​ನಲ್ಲಿ 100 ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಅವರು ಶುಕ್ರವಾರ ನಡೆದ ಪಾಕಿಸ್ತಾನ ವನಿತೆಯರ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಅಯೇಷಾ ಜಾಫರ್ ಅವರನ್ನು ಬೌಲ್ಡ್​ ಮಾಡುವ ಮೂಲಕ ಈ ದಾಖಲೆಗೆ ಪಾತ್ರರಾದರು. ಅವರು ಈ ಪಂದ್ಯದಲ್ಲಿ ಜಾಫರ್(8) ಜೊತೆಗೆ ಅಲಿಯಾ(2) ಅವರ ವಿಕೆಟ್ ಕೂಡ ಪಡೆದರು.

ವೆಸ್ಟ್ ಇಂಡೀಸ್ ತಂಡದ ಅನಿಸಾ ಮೊಹಮ್ಮದ್ ಟಿ-20 ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಬೌಲರ್​ ಎನಿಸಿಕೊಂಡಿದ್ದಾರೆ. ಅವರು 120 ವಿಕೆಟ್ ಪಡೆದಿದ್ದಾರೆ. 2ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಆಲ್​ರೌಂಡರ್​ ಎಲಿಸ್ ಪೆರ್ರಿ 114 ವಿಕೆಟ್​ ಪಡೆದಿದ್ದಾರೆ. ಇಂಗ್ಲೆಂಡ್​ ತಂಡದ ಆ್ಯನಿ ಶ್ರುಬ್​ಸೋಲ್ 101 ವಿಕೆಟ್ ಪಡೆದಿದ್ದಾರೆ.

ಪಾಕಿಸ್ತಾನದ ನಿಡಾ ಧಾರ್ 98 ಮತ್ತು ಭಾರತದ ಪೂನಂ ಯಾದವ್​ 95 ವಿಕೆಟ್​ ಪಡೆದು ನಂತರದ ಸ್ಥಾನದಲ್ಲಿದ್ದಾರೆ.

ಪುರುಷರ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ಪರ ಡೇಲ್​ ಸ್ಟೈನ್(64) ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅಲ್ಲದೆ ಶ್ರೀಲಂಕಾದ ಲಸಿತ್ ಮಾಲಿಂಗ (107) ಮಾತ್ರ ಟಿ-20 ಕ್ರಿಕೆಟ್​ನಲ್ಲಿ 100 ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ.

ಇದನ್ನು ಓದಿ:ಮರಿಝಾನ್ ಕಾಪ್​ ಆಲ್​ರೌಂಡರ್ ಆಟ : ಪಾಕ್ ಮಹಿಳೆಯರ ವಿರುದ್ಧ ಗೆದ್ದ ದ. ಆಫ್ರಿಕಾ

ABOUT THE AUTHOR

...view details