ಮುಂಬೈ: ಕ್ರಿಕೆಟ್ ಪಂದ್ಯಗಳ ಫಿಕ್ಸಿಂಗ್ ಪ್ರಕರಣದಲ್ಲಿ ಆರೋಪಿಯಾಗಿ, ತಲೆಮರೆಸಿಕೊಂಡು ಲಂಡನ್ನಲ್ಲಿ ನೆಲೆಸಿದ್ದ ಭಾರತೀಯ ಬುಕ್ಕಿ ಸಂಜೀವ್ ಚಾವ್ಲಾ ಭಾರತಕ್ಕೆ ಹಸ್ತಾಂತರಗೊಂಡಿದ್ದು, ಹೀಗಾಗಿ ಟೀಂ ಇಂಡಿಯಾದ ಅನೇಕ ಮಾಜಿ ಕ್ರಿಕೆಟ್ ಪ್ಲೇಯರ್ಸ್ಗಳಲ್ಲಿ ನಡುಕ ಶುರುವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
2000ರಲ್ಲಿ ದಕ್ಷಿಣ ಆಫ್ರಿಕಾ ಭಾರತದ ಪ್ರವಾಸ ಕೈಗೊಂಡಿದ್ದ ವೇಳೆ ಉಭಯ ತಂಡಗಳ ನಡುವಿನ ಕ್ರಿಕೆಟ್ ಸರಣಿಯ ಫಲಿತಾಂಶ ಮೊದಲೇ ನಿರ್ಧಾರವಾಗಿತ್ತು ಎಂದು ತಿಳಿದು ಬಂದಿತ್ತು. ಹೀಗಾಗಿ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅವರು ಭಾರತಕ್ಕೆ ಬೇಕಾಗಿದ್ದು, ಮ್ಯಾಚ್ ಫಿಕ್ಸಿಂಗ್ ನಡೆಸಿರುವ ಕಾರಣ ಅದರ ಮಾಹಿತಿ ಪಡೆದುಕೊಳ್ಳಲು ಭಾರತಕ್ಕೆ ಗಡಿಪಾರು ಮಾಡುವಂತೆ ಅಧಿಕಾರಿಗಳು ಕೇಳಿಕೊಂಡಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ಗಳಲ್ಲಿ ಫಿಕ್ಸಿಂಗ್ ನಡೆಸಿರುವ ಆರೋಪ ಇವರ ಮೇಲೆ ಕೇಳಿ ಬಂದಿದೆ.