ಕರ್ನಾಟಕ

karnataka

ETV Bharat / sports

ಕೆಎಲ್ ರಾಹುಲ್​ಗೆ ಇಷ್ಟುಬೇಗ ಉಪನಾಯಕ ಎಂದು ಘೋಷಣೆ ಮಾಡುವ ಅಗತ್ಯವೇನಿತ್ತು?: ದೀಪ ದಾಸ್​ ಗುಪ್ತಾ - KL rahul news

ಗಾಯಗೊಂಡಿರುವ ರೋಹಿತ್​ರನ್ನು ವೈದ್ಯಕೀಯ ವೀಕ್ಷಣೆಯಲ್ಲಿಟ್ಟಿದ್ದೇವೆ ಎನ್ನುವ ಆಯ್ಕೆ ಸಮಿತಿ ಪಂಜಾಬ್​ ತಂಡದಲ್ಲಿ ಗಾಯಗೊಂಡು ಎರಡು ಪಂದ್ಯಗಳಿಂದ ಹೊರಗಿರುವ ಮಯಾಂಕ್​ ಅಗರ್​ವಾಲ್​ರನ್ನು ಮೂರು ಮಾದರಿಯ ಕ್ರಿಕೆಟ್ ತಂಡಕ್ಕೆ ಏಕೆ ಆಯ್ಕೆ ಮಾಡಿದ್ದಾರೆ ಎಂದು ದೀಪ್​ದಾಸ್​ ಗುಪ್ತಾ ಪ್ರಶ್ನಿಸಿದ್ದಾರೆ.

ಭಾರತ ತಂಡದ ಉಪನಾಯಕ
ಕೆಎಲ್ ರಾಹುಲ್ -ರೋಹಿತ್ ಶರ್ಮಾ

By

Published : Oct 28, 2020, 8:38 PM IST

ಮುಂಬೈ:ಆಸ್ಟ್ರೇಲಿಯಾ ವಿರುದ್ಧದ ಪ್ರವಾಸಕ್ಕಾಗಿ ಘೋಷಿಸಿರುವ ಸೀಮಿತ ಓವರ್​ಗಳ ತಂಡಗಳಿಗೆ ಕೆ.ಎಲ್ ರಾಹುಲ್​ರನ್ನು ಉಪನಾಯಕನನ್ನಾಗಿ ನೇಮಕ ಮಾಡಿರುವುದಕ್ಕೆ ಮಾಜಿ ಕ್ರಿಕೆಟಿಗ ದೀಪ್​ದಾಸ ಗುಪ್ತಾ ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿ ಕೆಎಲ್ ‍ರಾಹುಲ್​ರನ್ನು ಇಷ್ಟು ಅವಸರದಲ್ಲಿ ಉಪ ನಾಯಕ ಎಂದು ಘೋಷಣೆ ಮಾಡಿರುವುದು ಸರಿಯಾದ ನಿರ್ಧಾರವಲ್ಲ. ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಳ್ಳುವವರೆಗೆ ಕಾಯಬಹುದಿತ್ತು. ರೋಹಿತ್​ ಒಂದು ವೇಳೆ ಮುಂಬೈ ಇಂಡಿಯನ್ಸ್ ಪರ ಆಡಲು ಫಿಟ್ ಆದರೆ ಟೀಂ ಇಂಡಿಯಾಕ್ಕೂ ಬರಬಹುದು. ಹಾಗಾಗಿ ಉಪನಾಯಕನ ಘೋಷಣೆ ಅವಸರದ ನಿರ್ಧಾರ ಎಂದು ತಿಳಿಸಿದ್ದಾರೆ.

ಗಾಯಗೊಂಡಿರುವ ರೋಹಿತ್​ರನ್ನು ವೈದ್ಯಕೀಯ ವೀಕ್ಷಣೆಯಲ್ಲಿಟ್ಟಿದ್ದೇವೆ ಎನ್ನುವ ಆಯ್ಕೆ ಸಮಿತಿ ಪಂಜಾಬ್​ ತಂಡದಲ್ಲಿ ಗಾಯಗೊಂಡು ಎರಡು ಪಂದ್ಯಗಳಿಂದ ಹೊರಗಿರುವ ಮಯಾಂಕ್​ ಅಗರ್​ವಾಲ್​ರನ್ನು ಮೂರು ಮಾದರಿಯ ಕ್ರಿಕೆಟ್ ತಂಡಕ್ಕೆ ಏಕೆ ಆಯ್ಕೆ ಮಾಡಿದ್ದಾರೆ ಎಂದು ದೀಪ್​ದಾಸ್​ ಗುಪ್ತಾ ಪ್ರಶ್ನಿಸಿದ್ದಾರೆ.

ಇವರು ಮಾತ್ರವಲ್ಲದೆ ಮಾಜಿ ಸ್ಪಿನ್ನರ್​ ಪ್ರಗ್ಯಾನ್ ಓಝಾ ಕೂಡ ರೋಹಿತ್​ಗೆ ಒಂದು ನ್ಯಾಯ, ಮಯಾಂಕ್​ಗೆ ಮತ್ತೊಂದೇಕೆ ಎಂದು ಆಯ್ಕೆ ಸಮಿತಿ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

" ಆಯ್ಕೆ ಸಮಿತಿಯ ಈ ನಡೆಯು ಅರ್ಥವಾಗುತ್ತಿಲ್ಲ. ನಿಯಮ ಎಲ್ಲರಿಗೂ ಒಂದೇ ಆಗಬೇಕಲ್ಲವೇ. ಇದಲ್ಲದೇ ಕೆ.ಎಲ್. ರಾಹುಲ್ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ. ಪ್ರವಾಸದ ಆರಂಭಕ್ಕೆ ಮುನ್ನ ರೋಹಿತ್ ಶರ್ಮಾ ತಮ್ಮ ಫಿಟ್‌ನೆಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಂಡಕ್ಕೆ ಮರಳಿದರೆ ಮುಂದೇನು ಮಾಡ್ತಾರೆ. ರೋಹಿತ್‌ಗೆ ಉಪನಾಯಕನ ಸ್ಥಾನ ಕೊಡುವುದಿಲ್ಲವೇ?" ಎಂದಿದ್ದಾರೆ.

ABOUT THE AUTHOR

...view details