ದುಬೈ: ಪಾಕಿಸ್ತಾನ ವಿರುದ್ಧದ ಟಿ-20 ಸರಣಿಯಲ್ಲಿ 176 ರನ್ ಸಿಡಿಸಿ ಮಿಂಚಿದ್ದ ನ್ಯೂಜಿಲ್ಯಾಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಟಿಮ್ ಸೀಫರ್ಟ್ ಐಸಿಸಿ ಬುಧವಾರ ಬಿಡುಗಡೆ ಮಾಡಿರುವ ನೂತನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಬರೋಬ್ಬರಿ 24 ಸ್ಥಾನ ಏರಿಕೆ ಕಂಡಿದ್ದು, ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಸೀಫರ್ಟ್ ಈ ಸರಣಿಯಲ್ಲಿ 57, 84 ಮತ್ತು 35 ರನ್ ಗಳಿಸಿದ್ದರು. ಈ ಸರಣಿಗೂ ಮುನ್ನ ಅವರು 33ನೇ ಶ್ರೇಯಾಂಕದಲ್ಲಿದ್ದರು. ಇದೀಗ 9ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಮನ್ರೋ ಒಂದು ಸ್ಥಾನ ಕುಸಿದಿದ್ದರಿಂದ ಕೊಹ್ಲಿ 8ರಿಂದ 7ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.