ಕರ್ನಾಟಕ

karnataka

ETV Bharat / sports

ಕೇಂದ್ರ ಸಚಿವರಿಗೆ ವಿಹಾರಿ ತಿರುಗೇಟು... ಅಭಿಮಾನಿಗಳ ಜೊತೆ ಸಂಭ್ರಮಿಸಿದ ಅಶ್ವಿನ್​-ಸೆಹ್ವಾಗ್​ - ಅರಣ್ಯ ರಾಜ್ಯ ಸಚಿವ

ವಿಹಾರಿ ಕೇಂದ್ರ ಸಚಿವರಿಗೆ ಟಾಂಗ್ ನೀಡಿದ ಟ್ವೀಟ್​ ಭಾರಿ ವೈರಲ್​ ಆಗುತ್ತಿದ್ದು, ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಬಬಲ್​ ಸುಪ್ರಿಯೋ ಅವರಿಗೆ ಕ್ರಿಕೆಟ್​ ಬಗ್ಗೆ ಎರಡಕ್ಷರದ ಜ್ಞಾನವಿಲ್ಲ, ಸೋಲುವ ಪಂದ್ಯವನ್ನು 2ನೇ ಗ್ರೇಡ್​ ಗಾಯಕ್ಕೊಳಗಾದರೂ 3 ಗಂಟೆ ಮೈದಾನದಲ್ಲಿ ಆಡಿರುವುದಕ್ಕೆ ಮೊದಲು ಗೌರವ ಕೊಡಬೇಕೆಂದು ಭಾರತೀಯ ಕ್ರಿಕೆಟಿಗನ ಪರ ಬ್ಯಾಟಿಂಗ್ ಮಾಡಿದ್ದಾರೆ. ಜೊತೆಗೆ ಇದು ಟ್ವೀಟ್ ಆಫ್​ ದ ಡಿಕೇಡ್​ ಎಂದಿದ್ದಾರೆ.

ಹನುಮ ವಿಹಾರಿ, ಅಶ್ವಿನ್ ಸೆಹ್ವಾಗ್​
ಹನುಮ ವಿಹಾರಿ, ಅಶ್ವಿನ್ ಸೆಹ್ವಾಗ್​

By

Published : Jan 13, 2021, 9:55 PM IST

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಸೋಲುವ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಗಾಯಗೊಂಡಿದ್ದರೂ ತಂಡಕ್ಕಾಗಿ ಮೂರು ಗಂಟೆಗಳ ಕಾಲ ಅಶ್ವಿನ್ ಜೊತೆಗೂಡಿ ವಿಹಾರಿ 43 ಓವರ್​ಗಳ ಕಾಲ ಬ್ಯಾಟಿಂಗ್ ನಡೆಸಿದ್ದರು.

ಆದರೆ ಈ ಪಂದ್ಯ ಮುಗಿಯುತ್ತಿದ್ದಂತೆ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ, 109 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದ 'ಹನುಮ ಬಿಹಾರಿ' ಭಾರತ ಐತಿಹಾಸಿಕ ಟೆಸ್ಟ್​ ಜಯ ಸಾಧಿಸಬಹುದಾಗಿದ್ದ ಅವಕಾಶವನ್ನಷ್ಟೇ ಕೊಲೆ ಮಾಡಿಲ್ಲ, ಅವರು ಸಂಪೂರ್ಣ ಕ್ರಿಕೆಟ್​​ಅನ್ನೇ ಕೊಲೆ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು.​

ಆ ಟ್ವೀಟ್​ಗೆ ಇಂದು ಪ್ರತಿಕ್ರಿಯಿಸಿರುವ ವಿಹಾರಿ, ನನ್ನ ಹೆಸರು 'ಹನುಮ ವಿಹಾರಿ' ಎಂದು ಬಾಬುಲ್ ಸುಪ್ರಿಯೋ ಅವರ ಟ್ವೀಟ್​ಗೆ ಮಾರ್ಮಿಕವಾಗಿ ತಾವೂ ಭಾರತಕ್ಕಾಗಿ ಅತ್ಯುತ್ತಮವಾದ ಕ್ರಿಕೆಟ್​ ಆಡಿರುವುದಾಗಿ ದೈರ್ಯದಿಂದ ಉತ್ತರ ಕೊಟ್ಟಿದ್ದರು.

ವಿಹಾರಿ ಕೇಂದ್ರ ಸಚಿವರಿಗೆ ಟಾಂಗ್ ನೀಡಿದ ಟ್ವೀಟ್​ ಭಾರಿ ವೈರಲ್​ ಆಗುತ್ತಿದ್ದು, ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಬಬಲ್​ ಸುಪ್ರಿಯೋ ಅವರಿಗೆ ಕ್ರಿಕೆಟ್​ ಬಗ್ಗೆ ಎರಡಕ್ಷರದ ಜ್ಞಾನವಿಲ್ಲ, ಸೋಲುವ ಪಂದ್ಯವನ್ನು 2ನೇ ಗ್ರೇಡ್​ ಗಾಯಕ್ಕೊಳಗಾದರೂ 3 ಗಂಟೆ ಮೈದಾನದಲ್ಲಿ ಆಡಿರುವುದಕ್ಕೆ ಮೊದಲು ಗೌರವ ಕೊಡಬೇಕೆಂದು ಭಾರತೀಯ ಕ್ರಿಕೆಟಿಗನ ಪರ ಬ್ಯಾಟಿಂಗ್ ಮಾಡಿದ್ದಾರೆ. ಜೊತೆಗೆ ಇದು ಟ್ವೀಟ್ ಆಫ್​ ದ ಡಿಕೇಡ್​ ಎಂದಿದ್ದಾರೆ.

ಕೇವಲ ಅಭಿಮಾನಿಗಳಲ್ಲದೆ, ವಿಹಾರಿ ಜೊತೆ ದಾಖಲೆಯ ಜೊತೆಯಾಟದಲ್ಲಿ ಭಾಗಿಯಾಗಿದ್ದ ಅಶ್ವಿನ್​ ಕೂಡ ವಿಹಾರಿ ಉತ್ತರ ನೋಡಿ ನೆಲದ ಮೇಲೆ ಹೊರಳಾಡುವಷ್ಟು ನಗು ಬರುತ್ತಿದೆ ಎಂಬರ್ಥದಲ್ಲಿ (ROFLMAX!! )ಎಂದು ಟ್ವೀಟ್ ಮಾಡಿದ್ದರು. ಇದೀಗ ಸೆಹ್ವಾಗ್ ಕೂಡ ಟ್ವೀಟ್ ಮಾಡಿದ್ದು, 'ಆಪ್ನ ವಿಹಾರಿ ಸಬ್ ಪರ್​​ ಭಾರಿ'(ನಮ್ಮ ವಿಹಾರಿ ಎಲ್ಲರಿಗಿಂತಲೂ ಒಂದು ಕೈ ಮೇಲೂ) ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details