ಕರ್ನಾಟಕ

karnataka

By

Published : Jan 24, 2021, 3:09 PM IST

ETV Bharat / sports

ಇಂಗ್ಲೆಂಡ್​ ತಂಡಕ್ಕಿಂತ ಮುಂಚಿತವಾಗಿ ಭಾರತಕ್ಕೆ ಆಗಮಿಸುತ್ತಿದ್ದಾರೆ ಬೆನ್​ ಸ್ಟೋಕ್ಸ್​!

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿ ಗೆದ್ದಿರುವ ಭಾರತ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ಪ್ರವೇಶಿಸುವ ದೃಷ್ಟಿಯಿಂದ ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲುವ ಆಲೋಚನೆಯಲ್ಲಿದೆ. ಕಳೆದ ಬಾರಿ ಇಂಗ್ಲೆಂಡ್​ ತಂಡ ಭಾರತಕ್ಕೆ ಬಂದಿದ್ದ ವೇಳೆ ಕೊಹ್ಲಿ ಬಳಗ 4-0ಯಲ್ಲಿ ಸರಣಿ ಗೆದ್ದಿತ್ತು..

ಬೆನ್​ ಸ್ಟೋಕ್ಸ್​
ಬೆನ್​ ಸ್ಟೋಕ್ಸ್​

ಲಂಡನ್ ​:ಭಾರತದ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿ, 5 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡುವುದಕ್ಕಾಗಿ ಇಂಗ್ಲೆಂಡ್​ ತಂಡದ ಆಲ್​ರೌಂಡರ್​ ಬೆನ್​ಸ್ಟೋಕ್ಸ್​ ಭಾರತಕ್ಕೆ ಆಗಮಿಸಲು ವಿಮಾನ ಏರಿದ್ದಾರೆ. ಭಾನುವಾರ ಟ್ವಿಟರ್​ನಲ್ಲಿ ತಾವು ವಿಮಾನದಲ್ಲಿರುವ ಫೋಟೋವನ್ನು ಶೇರ್​ ಮಾಡಿಕೊಂಡಿರುವ ಸ್ಟೋಕ್ಸ್​, ಆದಷ್ಟು ಬೇಗ ಭಾರತದಲ್ಲಿ ಸಿಗೋಣ ಎಂದು ಬರೆದುಕೊಂಡಿದ್ದಾರೆ.

ಬೆನ್​ಸ್ಟೋಕ್ಸ್​, ಜೋಫ್ರಾ ಆರ್ಚರ್​ ಮತ್ತು ರೋನಿ ಬರ್ನ್ಸ್​ ಇಂಗ್ಲೆಂಡ್ ತಂಡಕ್ಕಿಂತ ಬೇಗ ಭಾರತಕ್ಕೆ ಆಗಮಿಸುತ್ತಿದ್ದಾರೆ. ಯಾಕೆಂದರೆ, ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡ ಪ್ರಸ್ತುತ ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿಯನ್ನಾಡುತ್ತಿದೆ. ಆ ಸರಣಿ ಜನವರಿ 26ಕ್ಕೆ ಮುಗಿಯಲಿದ್ದು, 27ಕ್ಕೆ ಚೆನ್ನೈಗೆ ಬಂದು ಸೇರಲಿದೆ. ಈ ಮೂವರು ದಕ್ಷಿಣ ಆಫ್ರಿಕಾ ಸರಣಿ ಮುಗಿದ ಮೇಲೆ ವಿಶ್ರಾಂತಿ ತೆಗೆದುಕೊಂಡಿದ್ದರು.

ಇನ್ನು,ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿ ಗೆದ್ದಿರುವ ಭಾರತ ತಂಡ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ಪ್ರವೇಶಿಸುವ ದೃಷ್ಟಿಯಿಂದ ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲುವ ಆಲೋಚನೆಯಲ್ಲಿದೆ. ಕಳೆದ ಬಾರಿ ಇಂಗ್ಲೆಂಡ್​ ತಂಡ ಭಾರತಕ್ಕೆ ಬಂದಿದ್ದ ವೇಳೆ ಕೊಹ್ಲಿ ಬಳಗ 4-0ಯಲ್ಲಿ ಸರಣಿ ಗೆದ್ದಿತ್ತು.

ಪ್ರಸ್ತುತ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳಲ್ಲಿ ಸರಣಿಯನ್ನು 2-0ಯಲ್ಲಿ ಗೆದ್ದರೆ ಫೈನಲ್ ಸ್ಥಾನ ಖಚಿತವಾಗಲಿದೆ. ಒಂದು ವೇಳೆ ಇಂಗ್ಲೆಂಡ್​ ವಿರುದ್ಧ ಒಂದು ಟೆಸ್ಟ್​ ಪಂದ್ಯ ಸೋತರೆ ಉಳಿದ 3 ಪಂದ್ಯ ಗೆಲ್ಲಲೇಬೇಕಾಗುತ್ತದೆ.

ABOUT THE AUTHOR

...view details