ದುಬೈ:ಸನ್ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಎನ್ ನಟರಾಜನ್ ಭಾರತ ತಂಡಕ್ಕೆ ಸೇರ್ಪಡೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ನಾಯಕ ಡೇವಿಡ್ ವಾರ್ನರ್ , ಆಸ್ಟ್ರೇಲಿಯಾ ಆದಷ್ಟು ಬೇಗ ಸಿಗೋಣ ಎಂದು ಎಂದು ತಿಳಿಸಿದ್ದಾರೆ.
ಕೆಕೆಆರ್ ತಂಡದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ವರುಣ್ ಚಕ್ರವರ್ತಿ ಭುಜದ ನೋವಿಗೆ ತುತ್ತಾಗಿ ಭಾರತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಬಿಸಿಸಿಐ ಬದಲಿ ಆಟಗಾರನನ್ನಾಗಿ ನಟರಾಜನ್ರನ್ನು 3 ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ.
ನಮ್ಮ ಪಾಲಿಗೆ ಇದೊಂದ ಮಿಶ್ರ ಟೂರ್ನಿಯಾಗಿದೆ.ನಾವು ಉತ್ತಮವಾಗಿ ಆರಂಭ ಮಾಡಲಿಲ್ಲ. ಆದರೆ ಅಂತ್ಯದಲ್ಲಿ ನೀಡಿದ ಪ್ರದರ್ಶನಕ್ಕೆ ಹೆಮ್ಮೆ ಪಡುತ್ತೇನೆ. ಕೊನೆಯ ಲೀಗ್ ಪಂದ್ಯಗಳಲ್ಲಿ ತಂಡದ ಆಟಗಾರರು ನೀಡಿದ ಪ್ರದರ್ಶನಕ್ಕೆ ನಾನು ತುಂಬಾ ಗರ್ವಪಡುತ್ತೇನೆ. ಮುಂದಿನ ಮತ್ತೊಂದು ಸ್ಟೆಪ್ ಮುಂದಕ್ಕಿಟ್ಟು ಫೈನಲ್ ಪ್ರವೇಶಿಸುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಭಾರತ ತಂಡಕ್ಕೆ ಮೊದಲ ಬಾರಿ ಆಯ್ಕೆಯಾಗಿರುವ ಹಿನ್ನೆಲೆ ನಟರಾಜನ್ಗೆ ಅಭಿನಂದನೆ ಸಲ್ಲಿಸಿದ್ದಾರೆ." ಅಭಿನಂದನೆಗಳು ನಟ್ಟು, ನಿಮ್ಮನ್ನು ಆಸ್ಟ್ರೇಲಿಯಾದಲ್ಲಿ ಕಾಣುತ್ತೇನೆ" ಎಂದು ಹೇಳಿದ್ದಾರೆ.
ಈ ಸರಣಿಯಲ್ಲಿ ನಟರಾಜನ್ ಜೊತೆಗೆ ಹೈದರಾಬಾದ್ ತಂಡ ಮನೀಶ್ ಪಾಂಡೆ ಕೂಡ ಅವಕಾಶ ಪಡೆದಿದ್ದಾರೆ.