ಕರ್ನಾಟಕ

karnataka

ETV Bharat / sports

ಒಮನ್,ಸ್ಕಾಟ್ಲೆಂಡ್ ಇನ್​​... ಟಿ20 ವಿಶ್ವಕಪ್​​ ಸಮರಕ್ಕೆ ಜಸ್ಟ್ 1 ವರ್ಷ ಬಾಕಿ - ಟಿ20 ವಿಶ್ವಕಪ್ ಲೇಟೆಸ್ಟ್ ಸುದ್ದಿ

ಬುಧವಾರ ನಡೆದ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು 12 ರನ್​ಗಳಿಂದ ಮಣಿಸುವ ಮೂಲಕ ಓಮನ್ ಆಸ್ಟ್ರೇಲಿಯಾದ ಟಿಕೆಟ್ ಗಿಟ್ಟಿಸಿಕೊಂಡಿದೆ. ಬುಧವಾರದಂದೇ ನಡೆದ ಮತ್ತೊಂದು ಪಂದ್ಯದಲ್ಲಿ ಯುಎಇ ತಂಡಕ್ಕೆ ಸೋಲುಣಿಸಿ ಸ್ಕಾಟ್ಲೆಂಡ್ ಸಹ ಕಾಂಗರೂ ನಾಡಿನಲ್ಲಿ ನಡೆಯುವ ಮಹಾಸಮರಕ್ಕೆ ಅರ್ಹತೆ ಪಡೆದಿದೆ.

ಟಿ20 ವಿಶ್ವಕಪ್

By

Published : Oct 31, 2019, 6:41 AM IST

ದುಬೈ:ಟಿ20 ವಿಶ್ವಕಪ್ ಸಮರಕ್ಕೆ ಇನ್ನು ಸರಿಯಾಗಿ ಒಂದು ವರ್ಷ ಬಾಕಿ ಇದ್ದು, ಅರ್ಹತಾ ಪಂದ್ಯದ ಮೂಲಕ ಚುಟುಕು ಸಮರಕ್ಕೆ ತಂಡಗಳ ಆಯ್ಕೆ ಪೂರ್ಣಗೊಂಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು 12 ರನ್​ಗಳಿಂದ ಮಣಿಸುವ ಮೂಲಕ ಓಮನ್ ಆಸ್ಟ್ರೇಲಿಯಾದ ಟಿಕೆಟ್ ಗಿಟ್ಟಿಸಿಕೊಂಡಿದೆ. ಬುಧವಾರದಂದೇ ನಡೆದ ಮತ್ತೊಂದು ಪಂದ್ಯದಲ್ಲಿ ಯುಎಇ ತಂಡಕ್ಕೆ ಸೋಲುಣಿಸಿ ಸ್ಕಾಟ್ಲೆಂಡ್ ಸಹ ಕಾಂಗರೂ ನಾಡಿನಲ್ಲಿ ನಡೆಯುವ ಮಹಾಸಮರಕ್ಕೆ ಅರ್ಹತೆ ಪಡೆದಿದೆ.

ಬುಧವಾರದ ಫಲಿತಾಂಶದೊಂದಿಗೆ ಹದಿನಾರು ತಂಡಗಳು ಅಂತಿಮವಾಗಿವೆ. ಪಪುವಾ ನ್ಯೂಗಿನಿ, ಐರ್ಲೆಂಡ್, ನೆದರ್ಲೆಂಡ್, ನಮೀಬಿಯಾ, ಓಮನ್, ಸ್ಕಾಟ್ಲೆಂಡ್ ತಂಡಗಳು ಟಿ20 ಕ್ವಾಲಿಫೈಯರ್​ ಮೂಲಕ ಅರ್ಹತೆ ಪಡೆದುಕೊಂಡಿವೆ. ಇವುಗಳಲ್ಲಿ ಪಪುವಾ ನ್ಯೂಗಿನಿಗೆ ಮಾತ್ರವೇ ಇದು ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಾಗಿದ್ದು, ಉಳಿದ ತಂಡಗಳು ಈ ಹಿಂದಿನ ವಿಶ್ವಕಪ್​ನಲ್ಲಿ ಕಾಣಿಸಿಕೊಂಡಿದ್ದವು.

ಹೇಗಿರಲಿದೆ ಪಂದ್ಯಾಟ..?

2020ರ ಅಕ್ಟೋಬರ್​ 18ರಂದು ಆರಂಭವಾಗಲಿರುವ ಪುರುಷರ ಟಿ20 ವಿಶ್ವಕಪ್​​ ಈ ಬಾರಿ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಿದೆ.

ಈಗಾಗಲೇ ಅರ್ಹತಾ ಸುತ್ತಿನಲ್ಲಿ ಗೆದ್ದಿರುವ ತಂಡಗಳು ಗ್ರೂಪ್​ ಸ್ಟೇಜ್​ನಲ್ಲಿ ಒಂದಷ್ಟು ಪಂದ್ಯಗಳನ್ನಾಡಲಿದ್ದು, ಇಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಜೊತೆಯಾಗಲಿವೆ. ಗ್ರೂಪ್​ ಸ್ಟೇಜ್​ನ ಅಗ್ರ ನಾಲ್ಕು ತಂಡಗಳು ಸೂಪರ್ 12 ಸೇರ್ಪಡೆಯಾಗಲಿವೆ.

ಗ್ರೂಪ್ ಸ್ಟೇಜ್ ತಂಡಗಳು:

  • ಶ್ರೀಲಂಕಾ
  • ಬಾಂಗ್ಲಾದೇಶ
  • ಪಪುವಾ ನ್ಯೂಗಿನಿ
  • ಐರ್ಲೆಂಡ್
  • ನೆದರ್ಲೆಂಡ್
  • ನಮೀಬಿಯಾ
  • ಸ್ಕಾಟ್ಲೆಂಡ್
  • ಓಮನ್

ಸೂಪರ್ 12:

  • ಭಾರತ
  • ಪಾಕಿಸ್ತಾನ
  • ಇಂಗ್ಲೆಂಡ್
  • ಆಸ್ಟ್ರೇಲಿಯಾ
  • ದಕ್ಷಿಣ ಆಫ್ರಿಕಾ
  • ನ್ಯೂಜಿಲ್ಯಾಂಡ್
  • ವೆಸ್ಟ್ ಇಂಡೀಸ್
  • ಅಫ್ಘಾನಿಸ್ತಾನ

ABOUT THE AUTHOR

...view details