ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನದಲ್ಲಿ ಟೀಂ ಇಂಡಿಯಾ ಪರಾಜಯ ಕಂಡಿತ್ತು. ಆದರೆ, ಈ ಮ್ಯಾಚ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೊಹ್ಲಿ ಸೇನೆ, 4 ವಿಕೆಟ್ಗಳ ನಷ್ಟಕ್ಕೆ 347 ರನ್ ಗಳ ಟಾರ್ಗೆಟ್ ನೀಡಿಯೂ ಸೋಲು ಕಂಡಿತು. ಈ ನಡುವೆಯೂ ಯುವ ಆಟಗಾರ ಶ್ರೇಯಸ್ ಅಯ್ಯರ್ ಮೊದಲ ಶತಕ ಬಾರಿಸಿ ಗಮನ ಸೆಳೆದರು.
ಈ ಮ್ಯಾಚ್ನಲ್ಲಿ ಭಾರತ ಪರವಾಗಿ 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಯುವ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್, ಸೆಂಚುರಿ ಮಾಡಿ ಬೀಗಿದರು. ಬಳಿಕ ಮಾತನಾಡಿದ ಅವರು, ಭಾರತ-ಎ ತಂಡದ ಪರವಾಗಿ ನಾಲ್ಕನೇ ಸ್ಥಾನದಲ್ಲಿ ಆಡುವುದು ಅಷ್ಟು ಸುಲಭವಲ್ಲ. ಪರಿಸ್ಥಿತಿ ನೋಡಿ ಆಡಬೇಕಾಗುತ್ತದೆ. ನಾನು ಯಾವಾಗಲೂ 3 ಅಥವಾ 5 ಸ್ಥಾನಗಳ ಮಧ್ಯೆ ಬ್ಯಾಟಿಂಗ್ ಮಾಡುತ್ತಿದ್ದೆ. ಹಾಗಾಗಿ ಭಿನ್ನ ಪರಿಸ್ಥಿತಿಗಳಲ್ಲಿ ಆಟವಾಡುವುದು ಅಭ್ಯಾಸವಾಗಿದೆ ಎಂದರು.
ಈ ಮ್ಯಾಚ್ನಲ್ಲಿ ಶ್ರೇಯಸ್ 107 ಬಾಲ್ಸ್ ಎದುರಿಸಿ 103ರನ್ ಗಳಿಸಿದರು ಈ ಪಂದ್ಯದಲ್ಲಿ ಶ್ರೇಯಸ್ 107 ಚಂಡುಗಳನ್ನ ಎದುರಿಸಿ 103ರನ್ ಗಳಿಸಿದರು. ಈ ಸೆಂಚುರಿಯ ಕುರಿತು ಮಾತನಾಡಿರುವ ಅಯ್ಯರ್, ಸೆಂಚುರಿ ಬಾರಿಸಿರುವುದು ತುಂಬಾ ಸಂತಸ ತಂದಿದೆ. ಆದರೆ, ಮ್ಯಾಚ್ ಗೆದ್ದಿದ್ದರೇ ಇನ್ನೂ ಖುಷಿಯಾಗಿರುತಿತ್ತು ಎಂದರು. ಮಾತು ಮುಂದುವರಿಸಿದ ಅವರು, ಸ್ವಲ್ಪ ಸಮಯ ಕಳೆದ ಬಳಿಕ ನನ್ನ ಶೈಲಿಯಲ್ಲಿ ಆಟವನ್ನಾಡಿದೆ. ಪ್ರಾರಂಭದಲ್ಲಿ ಸಾಕಷ್ಟು ಡಾಟ್ ಬಾಲ್ಸ್ ಮಾಡಿದೆ. ನಂತರ ಕವರ್ ಮಾಡಲು ಆರಂಭಿಸಿದೆ. ಈ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಂಡಿದ್ದೆ. ಅಂದುಕೊಂಡಂತೆ ಬಾಲ್ ನೇರವಾಗಿ ಬ್ಯಾಟ್ ಮೇಲೆ ಬರುತಿತ್ತು ಎಂದರು. ಸೆಕೆಂಡ್ ಇನ್ನಿಂಗ್ಸ್ನಲ್ಲಿ ತೇವಾಂಶ ಹೆಚ್ಚು ಪ್ರಭಾವ ಬೀರಿತ್ತು, ಕಿವಿಸ್ ಕೂಡ ಒಳ್ಳೆಯ ಪ್ರದರ್ಶನ ನೀಡಿತು ಎಂದರು.
ಎರಡನೇ ಏಕದಿನ ಇದೇ ಶನಿವಾರ ನಡೆಯಲಿದೆ.