ಸಿಡ್ನಿ:ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಪ್ಲೇಯರ್ಸ್ಗೆ ಜನಾಂಗೀಯ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಇದಕ್ಕೆ ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಮೆಯಾಚನೆ ಮಾಡಿದೆ. ಇದೀಗ ಟೀಂ ಇಂಡಿಯಾ ಟೆಸ್ಟ್ ತಂಡದ ಕ್ಯಾಪ್ಟನ್ ರಹಾನೆ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಅವರ ವಿರುದ್ಧ ಜನಾಂಗೀಯ ನಿಂದನೆ ನಡೆದಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಈಗಾಗಲೇ ದೂರು ದಾಖಲು ಮಾಡಿದೆ.
ಓದಿ: 'ಆಸೀಸ್ ವಿರುದ್ಧ ಭಾರತ ಡ್ರಾ ಮಾಡ್ಕೊಂಡಿಲ್ಲ ಗೆದ್ದಿದೆ' ಎಂದ ಮಹೀಂದ್ರಾ,: 'ಇದು ನವ ಭಾರತ'ಎಂದ ಕೇಂದ್ರ ಸಚಿವ
ಟೆಸ್ಟ್ ಪಂದ್ಯದ ವೇಳೆ ನಮ್ಮ ಆಟಗಾರರೊಂದಿಗೆ ನಡೆದಿರುವ ಘಟನೆ ಸ್ವೀಕಾರಾರ್ಹವಲ್ಲ. ವಿಶ್ವದ ಯಾವುದೇ ತಂಡದ ವಿರುದ್ಧ ಈ ರೀತಿಯಾಗಿ ನಡೆಯಬಾರದು ಎಂದು ರಹಾನೆ ತಿಳಿಸಿದ್ದಾರೆ. ಪ್ರೇಕ್ಷಕರ ವರ್ತನೆಯಿಂದ ತಂಡ ಅಸಮಾಧಾನಗೊಂಡಿದೆ ಎಂದಿರುವ ಅವರು, ನಾವು ದೂರು ನೀಡಿದ್ದೇವೆ. ಅಧಿಕಾರಿಗಳು ಪ್ರಕರಣ ಪರಿಶೀಲಿಸುತ್ತಿದ್ದಾರೆ. ಮೈದಾನದಲ್ಲಿ ಏನಾದರೂ ಸಂಭವಿಸಿದರೂ ಅದು ಸ್ವೀಕಾರಾರ್ಹವಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೌಂಡರಿ ಲೈನ್ನಲ್ಲಿ ಸಿರಾಜ್ ಫೀಲ್ಡಿಂಗ್ ಮಾಡ್ತಿದ್ದ ವೇಳೆ ಪ್ರೇಕ್ಷಕರು ಅವರ ವಿರುದ್ಧ ಮಾತನಾಡಿರುವ ಕೆಲವೊಂದು ದೃಶ್ಯಗಳು ಲಭ್ಯವಾಗಿವೆ ಎಂದಿದ್ದಾರೆ. ಸಿಡ್ನಿ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿದ್ದು, ಟೀಂ ಇಂಡಿಯಾ ಆಟಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.