ಮುಂಬೈ: ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಭಾನುವಾರ ಅಭಿಮಾನಿಗಳೊಂದಿಗೆ ಟ್ವಿಟರ್ ಸಂವಾದ ನಡೆಸಿದ್ದು, ಅದರಲ್ಲಿ ಧೋನಿ ಬಗ್ಗೆ ಒಂದು ಪದ ಹೇಳಿ ಎಂದಿದ್ದಕ್ಕೆ ಆತ ಚಿನ್ನ ಎಂದು ಉತ್ತರಿಸಿದರು.
ಧೋನಿ ಬಗ್ಗೆ ಒಂದು ಪದ ಹೇಳಿ ಅಂದ್ರೆ, 'ಚಿನ್ನ'ದಂತಹ ಉತ್ತರ ಕೊಟ್ಟ ಶೋಯಬ್ ಅಖ್ತರ್ - ವಿರಾಟ್ ಕೊಹ್ಲಿ
ಭಾನುವಾರ 30 ನಿಮಿಷಗಳ ಕಾಲ #AskShoiabAkhtar ಎಂಬ ಹ್ಯಾಶ್ಟ್ಯಾಗ್ನಲ್ಲಿ ಪ್ರಶ್ನೆಗಳನ್ನು ಕೇಳಲು ತಮ್ಮ ಅಭಿಮಾನಿಗಳಿಗೆ ಅವಕಾಶ ನೀಡಿದ್ದರು.
ಧೋನಿ ಮತ್ತು ಕೇನ್ ವಿಲಿಯಮ್ಸನ್ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಾ? ಎಂದರೆ ಧೋನಿಯನ್ನೇ ಮತ್ತೆ ಹೆಸರಿಸಿದ್ದಾರೆ. ಪ್ರಸ್ತುತ ಸಂಪೂರ್ಣ ಎಲ್ಲಾ ವಿಭಾಗದ ಬ್ಯಾಟ್ಸ್ಮನ್ ಯಾರು? ಎಂಬ ಪ್ರಶ್ನೆಗೆ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಎಂದು ಹೇಳಿದ್ದಾರೆ.
ಟೆಸ್ಟ್ ತಂಡದ ನೆಚ್ಚಿನ ನಾಯಕ ಯಾರು ಎಂದಿದ್ದಕ್ಕೆ ಕೇನ್ ವಿಲಿಯಮ್ಸನ್ ಎಂದೂ, ಟೆಸ್ಟ್ ಕ್ರಿಕೆಟ್ನಲ್ಲಿ ಸಚಿನ್ ಮತ್ತು ದ್ರಾವಿಡ್ರಲ್ಲಿ ಯಾರು ಬೆಸ್ಟ್ ಎಂದು ಕೇಳಿದ್ದಕ್ಕೆ ದ್ರಾವಿಡ್ ಹೆಸರು ಹೇಳಿದ್ದಾರೆ. ಜೊತೆಗೆ ವಾಸೀಂ ಅಕ್ರಮ್ ಮತ್ತು ಸೌರವ್ ಗಂಗೂಲಿ ನೆಚ್ಚಿನ ಕ್ಯಾಪ್ಟನ್ಸ್ ಎಂದು ತಿಳಿಸಿದ್ದಾರೆ.