ಮುಂಬೈ:ಮಧ್ಯ ಪ್ರದೇಶದ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಗ್ರೂಪ್ ಹಂತದ ಪಂದ್ಯದ ಮೊದಲ ದಿನದಂದು ವಾಂಖೆಡೆ ಮೈದಾನದಲ್ಲಿ 169 ರನ್ ಗಳಿಸುವ ಮೂಲಕ ಮುಂಬೈನ ಯುವ ಆಟಗಾರ ಸರ್ಫರಾಜ್ ಖಾನ್ ಮತ್ತೊಮ್ಮೆ ಅಬ್ಬರಿಸಿದ್ದಾರೆ.
ಒಂದು ಹಂತದಲ್ಲಿ ಮುಂಬೈ ತಂಡ 72 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಸರ್ಫರಾಜ್ ಮತ್ತು ಆಕರ್ಷಿತ್ ಗೊಮೆಲ್ ತಂಡಕ್ಕೆ ಆಸರೆಯಾದರು. ನಾಲ್ಕನೇ ವಿಕೆಟ್ಗೆ 275 ರನ್ಗಳ ಜೊತೆಯಾಟವಾಡಿದ್ರು.