ಕರಾಚಿ :ಪಾಕಿಸ್ತಾನ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಕ್ವಾಯ್ಡ್ ಎ ಅಜಮ್ ಟೂರ್ನಿಯ ವೇಳೆ ಅಸಭ್ಯ ಪದ ಬಳಕೆ ಮಾಡಿದ್ದರಿಂದ ಪಂದ್ಯ ಸಂಭಾವನೆಯ ಶೇ.35ರಷ್ಟನ್ನು ದಂಡವಾಗಿ ತೆತ್ತಿದ್ದಾರೆ.
ಪಂದ್ಯದ ವೇಳೆ ಅಸಭ್ಯ ಪದ ಬಳಕೆ.. ಸರ್ಫರಾಜ್ ಅಹ್ಮದ್ಗೆ ಭಾರಿ ದಂಡ - ಕ್ವಾಯ್ಡ್ ಎ ಅಜಮ್
ಸರ್ಫರಾಜ್, ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಾಗಿ ರೂಪಿಸಿರುವ ಪಿಸಿಬಿ ನಿಯಮ 2.21 ಅನ್ನು ಉಲ್ಲಂಘಿಸಿದ್ದಾರೆ..
33 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಿಂಧ್ ಫರ್ಸ್ಟ್ 11 ತಂಡವನ್ನು ಮುನ್ನಡೆಸುತ್ತಿದ್ದು, ಅವರು ಶನಿವಾರ ಬಲೂಚಿಸ್ತಾನ್ ವಿರುದ್ಧದ ಪಂದ್ಯದ ವೇಳೆ ಅಸಂಬದ್ಧ ಭಾಷಾ ಪ್ರಯೋಗ ಮಾಡಿದ್ದ ಪಿಸಿಬಿ ಲೆವೆಲ್ 1 ನಿಯಮವನ್ನು ಮುರಿದಿದ್ದಾರೆ ಎಂದು ತಿಳಿದು ಬಂದಿದೆ.
"ಅಂಪೈರ್ ತೀರ್ಮಾನವನ್ನು ಖಂಡಿಸಿ ಸರ್ಫರಾಜ್ ಅಹ್ಮದ್ ಅಸಭ್ಯ ಭಾಷಾ ಪ್ರಯೋಗ ಮಾಡಿದ್ದಾರೆ. ಅವರ ಮೇಲೆ ಫೀಲ್ಡ್ ಅಂಪೈರ್ಗಳಾದ ಫೈಸಲ್ ಆಫ್ರಿದಿ ಹಾಗೂ ಸಾದಿಕ್ ಖಾನ್ ವರದಿ ನೀಡಿದ್ದಾರೆ. ಸರ್ಫರಾಜ್, ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಾಗಿ ರೂಪಿಸಿರುವ ಪಿಸಿಬಿ ನಿಯಮ 2.21 ಅನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ, ಅವರಿಗೆ ಪಂದ್ಯದ ಸಂಭಾವನೆಯ ಶೇ.35ರಷ್ಟನ್ನು ದಂಡವಾಗಿ ವಿಧಿಸಲಾಗಿದೆ" ಎಂದು ಪಿಸಿಬಿ ಪ್ರಕಟಣೆ ಹೊರಡಿಸಿದೆ.