ಕರ್ನಾಟಕ

karnataka

ETV Bharat / sports

ಟೆಸ್ಟ್​​​ ಪಂದ್ಯದಲ್ಲಿ ಸ್ಟನ್ನಿಂಗ್​ ಕ್ಯಾಚ್​​... ಸ್ಯಾಂಟ್ನರ್​ ಜಂಪ್​​​​​​​​​​ ನೋಡಿ ಎಲ್ಲರೂ ಫಿದಾ! - ಇಂಗ್ಲೆಂಡ್​ ವರ್ಸಸ್​ ನ್ಯೂಜಿಲ್ಯಾಂಡ್​

ನ್ಯೂಜಿಲ್ಯಾಂಡ್​-ಇಂಗ್ಲೆಂಡ್​ ತಂಡಗಳ ನಡುವೆ ನಡೆಯುತ್ತಿದ್ದ ಟೆಸ್ಟ್​ ಪಂದ್ಯವೊಂದರಲ್ಲಿ ಆಲ್​ರೌಂಡರ್​ ಸ್ಯಾಂಟ್ನರ್​ ಪಡೆದ ಅದ್ಭುತ ಕ್ಯಾಚ್​ ವಿಡಿಯೋ ಇದೀಗ ವೈರಲ್​ ಆಗಿದೆ.

ಟೆಸ್ಟ್​​​ ಪಂದ್ಯದಲ್ಲಿ ಸ್ಟನ್ನಿಂಗ್​ ಕ್ಯಾಚ್

By

Published : Nov 25, 2019, 8:21 PM IST

ಮೌಂಟ್ ಮೌಂಗನುಯಿ:ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ತಂಡ ಭರ್ಜರಿ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಆಂಗ್ಲರ ಮೇಲೆ ಸವಾರಿ ನಡೆಸಿದೆ.

ಪಂದ್ಯ ನಡೆಯುತ್ತಿದ್ದ ವೇಳೆ ನ್ಯೂಜಿಲ್ಯಾಂಡ್​ ತಂಡದ ಆಲ್​ರೌಂಡರ್​ ಮಿಚೆಲ್​ ಸ್ಯಾಂಟ್ನರ್​ ಅವರ ಸ್ಟನ್ನಿಂಗ್​​ ಕ್ಯಾಚ್​ ನೋಡಿ ಎಲ್ಲರೂ ಫಿದಾ ಆಗಿದ್ದು, ಮೈದಾನದಲ್ಲಿ ಎಲ್ಲ ಸಹ ಆಟಗಾರರು ಅವರಿಗೆ ಅಭಿನಂದಿಸಿದ್ದಾರೆ.

ಮೊದಲ ಟೆಸ್ಟ್​​ ಪಂದ್ಯದ ಕೊನೆಯ ದಿನವಾದ ಇಂದು ಕಿವೀಸ್​ ತಂಡದ ಎಡಗೈ ವೇಗಿ ನೀಲ್ ವ್ಯಾಗ್ನರ್ ಅವರ ಬೌಲಿಂಗ್​ನಲ್ಲಿ ಮಿಚೆಲ್ ಸ್ಯಾಂಟ್ನರ್​ ಈ ಅದ್ಭುತ ಕ್ಯಾಚ್​ ಪಡೆದುಕೊಂಡಿದ್ದು, ಆ ಮೂಲಕ ಓಲೈ ಪೊಪ್ ಅವರನ್ನು ಪೆವಿಲಿಯನ್​ಗೆ ಅಟ್ಟಿದ್ದಾರೆ. ಬ್ಯಾಟ್​ಗೆ ಬಾಲ್​ ತಾಗುತ್ತಿದ್ದಂತೆ ಅದು ಸ್ಯಾಂಟ್ನರ್​ ಕಡೆ ಹಾರಿದ್ದು, ಈ ವೇಳೆ ಸೂಪರ್​ ಮ್ಯಾನ್​ ರೀತಿಯಲ್ಲಿ ಅವರು ಹಾರಿ ಒಂದೇ ಕೈಯಲ್ಲಿ ಕ್ಯಾಚ್​ ಹಿಡಿದಿದ್ದಾರೆ.

ಈ ಪಂದ್ಯದಲ್ಲಿ ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​​ನಲ್ಲಿ 353 ರನ್​ಗಳಿಗೆ ಹಾಗೂ ಎರಡನೇ ಇನ್ನಿಂಗ್ಸ್​​ನಲ್ಲಿ 197 ರನ್​ಗಳಿಗೆ ಆಲೌಟ್​ ಆಗಿದ್ದರಿಂದ ಕಿವೀಸ್​ ತಂಡ 65 ರನ್​ಗಳ ಇನ್ನಿಂಗ್ಸ್​ ಗೆಲುವು ದಾಖಲು ಮಾಡಿದೆ.

ABOUT THE AUTHOR

...view details