ಕರ್ನಾಟಕ

karnataka

'ವಿಂಡೀಸ್​​​ ವಿರುದ್ಧ ಸಂಜು ಸ್ಯಾಮ್ಸನ್​​​​​​ ಆರಂಭಿಕನಾಗಿ ಕಣಕ್ಕಿಳಿಯಬೇಕು'

ಕೆ.ಎಲ್.ರಾಹುಲ್, ರಿಷಭ್ ಪಂತ್, ಸಂಜು ಸ್ಯಾಮ್ಸನ್​ ಯಾರೇ ಆಗಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಬೇಕು ಎಂದು ಸಂಜು ಸ್ಯಾಮ್ಸನ್​ ಕೋಚ್ ಬಿಜು ಜಾರ್ಜ್​ ಹೇಳಿದ್ದಾರೆ.

By

Published : Dec 2, 2019, 7:27 PM IST

Published : Dec 2, 2019, 7:27 PM IST

Sanju Samson coach talks about Sanju Samson,ಭಾತರ ವೆಸ್ಟ್​ ಇಂಡೀಸ್ ಕ್ರಿಕೆಟ್ ಸರಣಿ
ಸಂಜು ಸ್ಯಾಮ್ಸನ್

ಹೈದರಾಬಾದ್:ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಮತ್ತು ಏಕದಿನ ಸರಣಿಗೆ ಶಿಖರ್​ ಧವನ್ ಬದಲು ಸ್ಥಾನ ಪಡೆದುಕೊಂಡಿರುವ ಯುವ ವಿಕೆಟ್​ ಕೀಪರ್​ ಸಂಜು ಸ್ಯಾಮ್ಸನ್​ ಆರಂಭಿಕನಾಗಿ ಕಣಕ್ಕಿಳಿಯಬೇಕು ಎಂದು ಸ್ಯಾಮ್ಸನ್​ ಕೋಚ್​ ಬಿಜು ಜಾರ್ಜ್​ ಹೇಳಿದ್ದಾರೆ.

ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಬಿಜು ಜಾರ್ಜ್​, ಸಂಜು ಸ್ಯಾಮ್ಸನ್​ ಒಬ್ಬ ಪ್ರತಿಭಾನ್ವಿತ ಆಟಗಾರ. ಉತ್ತಮವಾಗಿ ಆಡುವ ಸಾಮರ್ಥ್ಯವಿದ್ದರೂ ಅದೃಷ್ಟ ಕೈಕೊಟ್ಟ ಕಾರಣ ಟೀಂ ಇಂಡಿಯಾ ಮತ್ತು ಅಂಡರ್​-19 ಎರಡರಲ್ಲೂ ಆತನ ಪ್ರತಿಭೆಗೆ ತಕ್ಕ ಅವಕಾಶ ಸಿಗಲಿಲ್ಲ.

ಸಂಜು ಸ್ಯಾಮ್ಸನ್

ಅವಕಾಶಗಳಿಂದ ವಂಚಿತನಾದರೂ ಸ್ಯಾಮ್ಸನ್​ ಮಾತ್ರ ತನ್ನ ಛಲ ಬಿಡದೆ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಬಾಂಗ್ಲಾ ವಿರುದ್ಧದ ಸರಣಿಗೆ ಆಯ್ಕೆಯಾಗುವ ಮೂಲಕ 4 ವರ್ಷದ ನಂತರ ಟೀಂ ಇಂಡಿಯಾಗೆ ಕಮ್​​ಬ್ಯಾಕ್​ ಮಾಡಿದ್ದರು. ಆದರೆ ಆಡುವ 11ರ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಇದೀಗ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಗೆ ಶಿಖರ್​ ಧವನ್​ ಬದಲಿಗೆ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಸ್ಯಾಮ್ಸನ್​​ಗೆ ಧವನ್ ಬದಲಿಗೆ ಆರಂಭಿಕನಾಗಿಯೇ ಕಣಕ್ಕಿಳಿಸಬೇಕು ಎಂದು ಬಿಜು ಹೇಳಿದ್ದಾರೆ.

ರಿಷಭ್ ಪಂತ್ ಅವರ ಸಾಮರ್ಥ್ಯ ಅಳೆಯುವ ಶಕ್ತಿ ನನ್ನಲ್ಲಿಲ್ಲ. ಆದರೆ ಕೆ.ಎಲ್.ರಾಹುಲ್ ಆಗಲಿ, ರಿಷಭ್ ಪಂತ್ ಆಗಲಿ, ಸಂಜು ಸ್ಯಾಮ್ಸನ್​ ಆಗಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಬೇಕು ಎಂದು ಬಿಜು ಜಾರ್ಜ್​ ಹೇಳಿದ್ದಾರೆ.

ABOUT THE AUTHOR

...view details