ಕರ್ನಾಟಕ

karnataka

'ಅವಕಾಶವೇ ನೀಡದೆ ಸಂಜು ಸ್ಯಾಮ್ಸನ್​ ಕೈಬಿಟ್ಟಿದ್ದು ಎಷ್ಟು ಸರಿ'...?

ನಾಲ್ಕು ವರ್ಷದ ಬಳಿಕ ರಾಷ್ಟ್ರೀಯ ಟಿ20 ತಂಡಕ್ಕೆ ಮರಳಿದ್ದ ಸ್ಯಾಮ್ಸನ್ ವಿಂಡೀಸ್ ಸರಣಿಗೆ ಬೇಡವಾಗಿದ್ದಾರೆ. ಕೆರಬಿಯನ್ನರ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗುತ್ತಿದ್ದಂತೆ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

By

Published : Nov 21, 2019, 9:21 PM IST

Published : Nov 21, 2019, 9:21 PM IST

ಸಂಜು ಸ್ಯಾಮ್ಸನ್​

ಮುಂಬೈ: ಕೇರಳ ಮೂಲದ ಪ್ರತಿಭಾನ್ವಿತ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಬಾಂಗ್ಲಾದೇಶ ವಿರುದ್ಧ ಸರಣಿ ತಂಡದಲ್ಲಿದ್ದರೂ ಸ್ಯಾಮ್ಸನ್ ಆಟಕ್ಕೆ ಮಾತ್ರ ಅವಕಾಶ ದೊರೆತಿರಲಿಲ್ಲ. ಆಟದ ಪ್ರದರ್ಶನವನ್ನೇ ನೀಡಲು ಸಾಧ್ಯವಾಗದ ಸ್ಯಾಮ್ಸನ್​ರನ್ನು ವಿಂಡೀಸ್ ಸರಣಿಯಿಂದ ಆಯ್ಕೆ ಸಮಿತಿ ಹೊರಗಿಟ್ಟಿದೆ.

ಸಂಜು ಸ್ಯಾಮ್ಸನ್ ಚಂದ್ರನ ದಕ್ಷಿಣ ಧ್ರುವದಲ್ಲಿಯೂ ಆಡಬಲ್ಲರು: ಗಂಭೀರ್ ಪ್ರಶಂಸೆ​​​​​

ಬಾಂಗ್ಲಾದೇಶ ವಿರುದ್ಧ ಮೂರು ಟಿ20 ಪಂದ್ಯದಲ್ಲೂ ಸ್ಯಾಮ್ಸನ್ ಆಟಕ್ಕೆ ಅವಕಾಶವೇ ದೊರೆತಿರಲಿಲ್ಲ. ಹೀಗೆ ಮೈದಾನಕ್ಕಿಳಿಯದೇ ಇದ್ದ ಆಟಗಾರರನ್ನು ವಿಂಡೀಸ್ ಸರಣಿಯಿಂದ ಕೈಬಿಟ್ಟ ಬಗ್ಗೆ ನೆಟ್ಟಿಗರು ಅಯ್ಕೆ ಸಮಿತಿ ವಿರುದ್ಧ ಗರಂ ಆಗಿದ್ದಾರೆ.

ವಿಂಡೀಸ್ ಸರಣಿಗೆ ಇಬ್ಬರು ಕನ್ನಡಿಗರಿಗೆ ಮಣೆ... ಸ್ಯಾಮ್ಸನ್​ ಕೈಬಿಟ್ಟು, ಕೇದಾರ್ ಬಿಗಿದಪ್ಪಿದ ಆಯ್ಕೆ ಸಮಿತಿ

ಬರೋಬ್ಬರಿ ನಾಲ್ಕು ವರ್ಷದ ಬಳಿಕ ರಾಷ್ಟ್ರಿಯ ಟಿ-20 ತಂಡಕ್ಕೆ ಮರಳಿದ್ದ ಸ್ಯಾಮ್ಸನ್ ವಿಂಡೀಸ್ ಸರಣಿಗೆ ಬೇಡವಾಗಿದ್ದಾರೆ. ಕೆರಬಿಯನ್ನರ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗುತ್ತಿದ್ದಂತೆ ಟ್ವಿಟರ್​ನಲ್ಲಿ ಆಕ್ರೋಶ ಕಂಡುಬಂದಿದೆ.

ಒಂದೆಡೆ ರಿಷಭ್ ಪಂತ್ ಸತತ ವೈಫಲ್ಯ ಕಾಣುತ್ತಿದ್ದರೂ ಸ್ಯಾಮ್ಸನ್​​ನತ್ತ ಆಯ್ಕೆ ಸಮಿತಿ ಮುಖ ಮಾಡಿದಿರುವುದನ್ನು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ದ.ಆಫ್ರಿಕಾ ಹಾಗೂ ಬಾಂಗ್ಲಾ ಸರಣಿಯಲ್ಲಿ ಪಂತ್ ನೀರಸ ಪ್ರದರ್ಶನ ನೀಡಿದ್ದಾರೆ. ವಿಂಡೀಸ್ ವಿರುದ್ಧ ಏಕದಿನ ಹಾಗೂ ಟಿ-20 ಸರಣಿಗೆ ಸ್ಯಾಮ್ಸನ್ ಕೈಬಿಟ್ಟು ಪಂತ್ ಆರಿಸಿದ್ದು ಉಚಿತವಲ್ಲ ಎಂದು ಟ್ವಿಟ್ಟಿಗರು ಹೇಳಿದ್ದಾರೆ. ಪಂತ್ ಮೇಲೆ ದೇವರು ಮತ್ತು ಬಿಸಿಸಿಐ ಕರುಣೆ ಇದೆ ಎಂದು ಲೇವಡಿ ಮಾಡಿದ್ದಾರೆ.

ಕೇದಾರ್ ಜಾಧವ್ ಹಾಗೂ ಶಿಖರ್ ಧವನ್ ಸಹ ಅದ್ಭುತ ಫಾರ್ಮ್​ನಲ್ಲಿಲ್ಲ. ಇವರಿಬ್ಬರ ಆಯ್ಕೆಯೂ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಗಾಗಿದೆ.

ಸಂಜು ಸ್ಯಾಮ್ಸನ್​ ಬ್ಯಾಟಿಂಗ್

ABOUT THE AUTHOR

...view details