ಕರ್ನಾಟಕ

karnataka

ETV Bharat / sports

ಮಳೆಯಿಂದ ಮೈದಾನ ರಕ್ಷಿಸಿದ ಸಿಬ್ಬಂದಿಗಳ ಶ್ರಮವನ್ನು ಮೆಚ್ಚಿ ತನ್ನ ಸಂಭಾವನೆಯನ್ನೇ ನೀಡಿದ ಸಂಜು ಸಾಮ್ಸನ್​

ಸರಣಿಯ ಎಲ್ಲಾ ಪಂದ್ಯಗಳು ಮಳೆಗೆ ತುತ್ತಾಗಿದ್ದವು. ಆದರೆ ಎಲ್ಲಾ ಪಂದ್ಯಗಳಲ್ಲೂ ಓವರ್​ಗಳನ್ನು ಕಡಿತಗೊಳಿಸಿತ್ತೇ ವಿನಃ ರದ್ದಾಗಿರಲಿಲ್ಲ. ಇದರಿಂದ ಮಳೆಯಿಂದ ಮೈದಾನ ಒದ್ದೆಯಾಗದಂತಿರಲು ನೋಡಿಕೊಂಡ ಸಿಬ್ಬಂದಿಗಳಿಗೆ ತಮ್ಮ 2 ಪಂದ್ಯಗಳ ಸಂಭಾವನೆಯನ್ನು ನೀಡಲು ಸಂಜು ತೀರ್ಮಾನಿಸಿದ್ದಾರೆ.

Sanju Samson

By

Published : Sep 7, 2019, 11:57 PM IST

ತಿರುವನಂತಪುರಂ: ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಸಂಜು ಸಾಮ್ಸನ್​ ಆ ಪಂದ್ಯಗಳ ಸಂಭಾವನೆಯನ್ನು ಕ್ರೀಡಾಂಗಣ ಸಿಬ್ಬಂದಿಗಳಿಗೆ ನೀಡಿದ್ದಾರೆ.

ತಿರುವನಂತಪುರಂನಲ್ಲಿ ನಡೆದ 5 ಏಕದಿನ ಪಂದ್ಯಗಳ ಸರಣಿಯನ್ನು ಭಾರತ ತಂಡ 4-1ರಲ್ಲಿ ಜಯಿಸಿತ್ತು. ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿಸಿದ್ದ ಭಾರತ ತಂಡ ಸಾಮ್ಸನ್​ ಅವರ ಅಬ್ಬರದ ಬ್ಯಾಟಿಂಗ್​ ನೆರವಿನಿಂದ (91) 20 ಓವರ್​ಗಳಲ್ಲಿ 204 ರನ್​ಗಳಿಸಿತ್ತು.

ಸರಣಿಯ ಎಲ್ಲಾ ಪಂದ್ಯಗಳು ಮಳೆಗೆ ತುತ್ತಾಗಿದ್ದವು. ಆದರೆ ಎಲ್ಲಾ ಪಂದ್ಯಗಳಲ್ಲೂ ಓವರ್​ಗಳನ್ನು ಕಡಿತಗೊಳಿಸಿತ್ತೇ ವಿನಃ ರದ್ದಾಗಿರಲಿಲ್ಲ. ಇದರಿಂದ ಮಳೆಯಿಂದ ಮೈದಾನ ಒದ್ದೆಯಾಗದಂತಿರಲು ನೋಡಿಕೊಂಡ ಸಿಬ್ಬಂದಿಗಳಿಗೆ ತಮ್ಮ 2 ಪಂದ್ಯಗಳ ಸಂಭಾವನೆಯನ್ನು ನೀಡಲು ಸಂಜು ತೀರ್ಮಾನಿಸಿದ್ದಾರೆ.

ಸ್ವತಃ ಕೇರಳದವರಾದ ಸಂಜು ಕ್ರೀಡಾಂಗಣ ನಿರ್ವಹಣಾ ಸಿಬಂದಿಗಳು ಶ್ರಮಕ್ಕೆ ಮೆಚ್ಚಿ ಅವರ ಎರಡು ಪಂದ್ಯಗಳ ಸಂಭಾವನೆ 1.50 ಲಕ್ಷ ರೂ. ಮೊತ್ತವನ್ನು ಅಲ್ಲಿನ ಸಿಬಂದಿಗಳಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಸಂಜು ಸ್ಯಾಮ್ಸನ್‌ ಅವರ ಈ ನಿರ್ಧಾರಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ.

ABOUT THE AUTHOR

...view details