ಕರ್ನಾಟಕ

karnataka

ETV Bharat / sports

ಕೊಹ್ಲಿ ನಾಯಕತ್ವ ಕಳೆದುಕೊಳ್ಳುವಂತಹ ಕೆಲಸವೇನೂ ಮಾಡಿಲ್ಲ: ಗವಾಸ್ಕರ್ ವಿರುದ್ಧ ಮಾಜಿ ಕ್ರಿಕೆಟಿಗ ಗರಂ - ಕೊಹ್ಲಿ ನಾಯಕತ್ವ

ವಿಶ್ವಕಪ್ ಸೆಮಿಫೈನಲ್​ನಲ್ಲಿ ಭಾರತ ತಂಡ ಸೋಲನುಭವಿಸಿದ ಬೆನ್ನಲ್ಲೇ ನಾಯಕ ಕೊಹ್ಲಿಯ ನಾಯಕತ್ವ ಪ್ರಶ್ನಿಸಿದ್ದ ಮಾಜಿ ನಾಯಕ ಸುನಿಲ್​ ಗವಾಸ್ಕರ್​ ಹೇಳಿಕೆಯನ್ನು ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​ ಖಂಡಿಸಿದ್ದಾರೆ.

Sanjay Manjrekar

By

Published : Jul 30, 2019, 1:07 PM IST

Updated : Jul 31, 2019, 7:30 AM IST

ಮುಂಬೈ:ವಿಶ್ವಕಪ್ ಸೆಮಿಫೈನಲ್​ನಲ್ಲಿ ಭಾರತ ತಂಡ ಸೋಲನುಭವಿಸಿದ ಬೆನ್ನಲ್ಲೇ ನಾಯಕ ಕೊಹ್ಲಿಯ ನಾಯಕತ್ವ ಪ್ರಶ್ನಿಸಿದ್ದ ಮಾಜಿ ನಾಯಕ ಸುನಿಲ್​ ಗವಾಸ್ಕರ್​ ಹೇಳಿಕೆಯನ್ನು ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​ ಖಂಡಿಸಿದ್ದಾರೆ.

ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಕಿವೀಸ್​ ವಿರುದ್ಧ ಸೋಲನುಭವಿಸಿ ನಿರಾಸೆ ಅನುಭವಿಸಿತ್ತು. ನಂತರ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡುವಾಗ ಕೊಹ್ಲಿಯನ್ನು ಏಕಪಕ್ಷೀಯವಾಗಿ ನಾಯಕರೆಂದು ಘೋಷಿಸಲಾಗಿದೆ. ಆದರೆ ಇದೇ ತಂಡದಲ್ಲಿದ್ದ ಕೇದಾರ್​ ಜಾಧವ್​, ದಿನೇಶ್​ ಕಾರ್ತಿಕ್​ರನ್ನು ಮಾತ್ರ ತಂಡದಿಂದ ಕೈಬಿಡಲಾಗಿದೆ. ಕೊಹ್ಲಿಯನ್ನು ನಾಯಕನಾಗಿ ಆಯ್ಕೆ ಮಾಡಿದ ಮೇಲೆ ಇವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿತ್ತು. ಅದರಲ್ಲೂ ತಂಡದಲ್ಲಿ ಕೊಹ್ಲಿ ಮೇಲೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಅಸಮಾಧಾನವಿದ್ದರೂ ಅವರನ್ನು ಮತ್ತೆ ನಾಯಕನನ್ನಾಗಿ ಮುಂದುವರಿಸಿರುವುದನ್ನು ಗವಾಸ್ಕರ್​ ಖಂಡಿಸಿದ್ದರು.

ಈ ಹೇಳಿಕೆಯಿಂದ ಗವಾಸ್ಕರ್​ ವಿರುದ್ಧ ಗರಂ ಆಗಿರುವ ಸಂಜಯ್​ ಮಂಜ್ರೇಕರ್,​ "ನಿಮ್ಮ ಹೇಳಿಕೆ ಒಪ್ಪುವಂತದ್ದಲ್ಲ. ವಿಶ್ವಕಪ್​ನಲ್ಲಿ ಕೊಹ್ಲಿ ತಮ್ಮ ನಾಯಕತ್ವ ಕಳೆದುಕೊಳ್ಳುವಂತಹ ಕೆಟ್ಟ ಪ್ರದರ್ಶನ ನೀಡಿಲ್ಲ. ಇಡೀ ಟೂರ್ನಿಯಲ್ಲಿ ಕೇವಲ 2 ಪಂದ್ಯದಲ್ಲಿ ಸೋಲನುಭವಿಸಿದ್ದು, 7ರಲ್ಲಿ ಜಯ ಸಾಧಿಸಿದೆ. ಇದು ತಂಡದ ಕೆಟ್ಟ ಪ್ರದರ್ಶನ ಎಂದು ಹೇಳಲಾಗುವುದಿಲ್ಲ. ಅದರಲ್ಲೂ ಸೆಮಿಫೈನಲ್​ ಪಂದ್ಯ ಕಡಿಮೆ ಅಂತರದಿಂದ ಸೋತಿದೆ. ಹೀಗಾಗಿ ಕೊಹ್ಲಿಯನ್ನು ನಾಯಕನಾಗಿ ಮುಂದುವರೆಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಟ್ವೀಟ್​ ಮೂಲಕ ಹೇಳಿದ್ದಾರೆ.

ಕೊಹ್ಲಿ ನಾಯಕನಾದ ಮೇಲೆ ಭಾರತ ತಂಡದ 77 ಪಂದ್ಯಗಳಲ್ಲಿ 56 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 19 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಒಂದು ಪಂದ್ಯ ಟೈ ಆಗಿದೆ. 50ಕ್ಕೂ ಹೆಚ್ಚು ಪಂದ್ಯಗಳಲ್ಲಿ ನಾಯಕರಾಗಿರುವವರ ಪೈಕಿ ಕೊಹ್ಲಿ ನಾಯಕನಾಗಿ ಗೆಲುವಿನ ಸರಾಸರಿ 74.34 ಇದೆ. ಇವರನ್ನು ಬಿಟ್ಟರೆ ಧೋನಿ ಮಾತ್ರ 59.52 ಸರಾಸರಿ ಕಾಯ್ದುಕೊಂಡಿದ್ದಾರೆ. ಹೀಗಿರುವಾಗ ಕೆಲವು ಹಿರಿಯ ಕ್ರಿಕೆಟಿಗರು ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ.

Last Updated : Jul 31, 2019, 7:30 AM IST

ABOUT THE AUTHOR

...view details