ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಮಂದೀಪ್ ಸಿಂಗ್ ವಿಕೆಟ್ ಪಡೆಯುವ ಮೂಲಕ ಹೈದರಾಬಾದ್ ಬೌಲರ್ ಸಂದೀಪ್ ಶರ್ಮಾ ಐಪಿಎಲ್ನಲ್ಲಿ 100 ವಿಕೆಟ್ ಪೂರೈಸಿದ್ದಾರೆ.
ಪ್ಲೇ ಆಫ್ ಕನಸಿನಲ್ಲಿರುವ ಎರಡು ತಂಡಗಳು ಐಪಿಎಲ್ನ 43ನೇ ಪಂದ್ಯದಲ್ಲಿ ಸಂದೀಪ್ ಶರ್ಮಾ ಈ ಸಾಧನೆ ಮಾಡಿದ್ದಾರೆ. ಜೊತೆಗೆ ವೇಗವಾಗಿ ಈ ಸಾಧನೆ ಮಾಡಿದ 4ನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಲಸಿತ್ ಮಾಲಿಂಗ್ 70 ಪಂದ್ಯಗಳಲ್ಲಿ ನೂರು ವಿಕೆಟ್ ಪಡೆದು ವೇಗವಾಗಿ ಈ ಸಾಧನೆ ಮಾಡಿದ ಬೌಲರ್ ಆಗಿದ್ದಾರೆ. ನಂತರ ಭುವನೇಶ್ವರ್ ಕುಮಾರ್(82), ಆಶೀಷ್ ನೆಹ್ರಾ(83), ಸಂದೀಪ್ ಶರ್ಮಾ(87) ಹಾಗೂ ಡ್ವೇನ್ ಬ್ರಾವೋ (89) ನೇ ಸ್ಥಾನದಲ್ಲಿದ್ದಾರೆ.
ಒಟ್ಟಾರೆ ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಹಾಗೂ 100 ವಿಕೆಟ್ ಪಡೆದಿರುವ 15ನೇ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.