ಕರ್ನಾಟಕ

karnataka

ETV Bharat / sports

ಐಪಿಎಲ್ ಪವರ್​ ಪ್ಲೇನಲ್ಲಿ ಹೆಚ್ಚು ವಿಕೆಟ್​: ದಾಖಲೆ ಬರೆದ ಸಂದೀಪ್ ಶರ್ಮಾ - ಸಂದೀಪ್ ಶರ್ಮಾ

ಮುಂಬೈ ಇಂಡಿಯನ್ಸ್​ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಸಂದೀಪ್ ಶರ್ಮಾ 3 ವಿಕೆಟ್​ ಪಡೆದಿದ್ದರು. ಈ ಮೂಲಕ ಐಪಿಎಲ್​ ಪವರ್​ ಪ್ಲೇ ಓವರ್​ಗಳಲ್ಲಿ 53 ವಿಕೆಟ್ ಪಡೆದು ಭಾರತ ತಂಡದ ಮಾಜಿ ಬೌಲರ್​ ಜಹೀರ್​ ಖಾನ್​ ದಾಖಲೆ ಬ್ರೇಕ್ ಮಾಡಿದ್ದಾರೆ.

ಸಂದೀಪ್ ಶರ್ಮಾ
ಸಂದೀಪ್ ಶರ್ಮಾ

By

Published : Nov 4, 2020, 8:35 PM IST

ದುಬೈ:ಸನ್ ​ರೈಸರ್ಸ್​ ಹೈದರಾಬಾದ್​ ತಂಡದ ವೇಗಿ ಸಂದೀಪ್​ ಶರ್ಮಾ ಐಪಿಎಲ್​ ಪವರ್​ ಪ್ಲೇನಲ್ಲಿ ಹೆಚ್ಚು ವಿಕೆಟ್ ಪಡೆದ​ ದಾಖಲೆಗೆ ಪಾತ್ರರಾಗಿದ್ದಾರೆ.

ಮುಂಬೈ ಇಂಡಿಯನ್ಸ್​ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಸಂದೀಪ್ ಶರ್ಮಾ 3 ವಿಕೆಟ್​ ಪಡೆದಿದ್ದರು. ಈ ಮೂಲಕ ಐಪಿಎಲ್​ ಪವರ್​ ಪ್ಲೇ ಓವರ್​ಗಳಲ್ಲಿ 53 ವಿಕೆಟ್ ಪಡೆದು ಭಾರತ ತಂಡದ ಮಾಜಿ ಬೌಲರ್​ ಜಹೀರ್​ ಖಾನ್​ ದಾಖಲೆ ಬ್ರೇಕ್ ಮಾಡಿದ್ದಾರೆ.

ಜಹೀರ್​ ಖಾನ್​ ಐಪಿಎಲ್ ಪವರ್​ ಪ್ಲೇ ಓವರ್​ಗಳಲ್ಲಿ 52 ವಿಕೆಟ್​ ಪಡೆದಿದ್ದರು. ಇದೀಗ 53 ವಿಕೆಟ್​ ಪಡೆಯುವ ಮೂಲಕ ಐಪಿಎಲ್​ನಲ್ಲಿ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.

ಸಂದೀಪ್ ಶರ್ಮಾ ಐಪಿಎಲ್​ನಲ್ಲಿ 90 ಪಂದ್ಯಗಳಿಂದ 108 ವಿಕೆಟ್​ ಕಬಳಿಸಿದ್ದಾರೆ. ಪ್ರಸ್ತುತ ಆವೃತ್ತಿಯಲ್ಲಿ 11 ಪಂದ್ಯಗಳಿಂದ 13 ವಿಕೆಟ್ ಪಡೆದಿದ್ದಾರೆ.

ಇನ್ನು ಪವರ್​ ಪ್ಲೇನಲ್ಲಿ ಹೆಚ್ಚು ವಿಕೆಟ್​ ಪಡೆದ ಲಿಸ್ಟ್​ನಲ್ಲಿ ಸಂದೀಪ್(53) ಮತ್ತು ಜಹೀರ್​(52) ನಂತರ ಹೈದರಾಬಾದ್ ತಂಡದವರೇ ಆದ ಭುವನೇಶ್ವರ್​ ಕುಮಾರ್​(48), ಉಮೇಶ್ ಯಾದವ್​(44) ಹಾಗೂ ಧವಳ್ ಕುಲಕರ್ಣಿ (44) ಇದ್ದಾರೆ.

ABOUT THE AUTHOR

...view details