ನವದೆಹಲಿ: ಅಮೆರಿಕದಲ್ಲಿ ಕರಿಯ ಜನಾಂಗದ ವ್ಯಕ್ತಿ, ಪೊಲೀಸ್ರಿಂದ ಹತ್ಯೆಯಾದ ನಂತರ ವಿಶ್ವದೆಲ್ಲೆಡೆ ಕಪ್ಪು ಜನಾಂಗದ ಜನರು ತಮ್ಮ ಮೇಲೆ ಆಗುತ್ತಿರುವ ನ್ಯಾಯಾಂಗ ನಿಂದನೆಯ ವಿರುದ್ಧ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಫುಟ್ಬಾಲ್ ಆಟಗಾರರು, ಕ್ರಿಕೆಟಿಗರು ಹಾಗೂ ಅಥ್ಲೀಟ್ಗಳು ಕೂಡ ಕ್ರೀಡಾ ಕ್ಷೇತ್ರದಲ್ಲಿ ಆಗುತ್ತಿರುವ ವರ್ಣಭೇದದ ಬಗ್ಗೆ ಧ್ವನಿಯತ್ತಿದ್ದಾರೆ.
ಐಪಿಎಲ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದ ವಿಂಡೀಸ್ಗೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಡೇರೆನ್ ಸಾಮಿ ಕೂಡ ತಮ್ಮ ತಂಡದ ಆಟಗಾರರು ತಮ್ಮನ್ನು ಕಲು(ಕರಿಯ) ಎಂದು ಪಂದ್ಯದ ವೇಳೆ ಕರೆಯುತ್ತಿದ್ದರು. ಕಲು ಎಂಬ ಪದದ ಅರ್ಥ ಇದೀಗ ಅವರಿಗೆ ಅರ್ಥವಾಗಿದ್ದು, ಹಾಗೆ ಕರೆದಿದ್ದವರೆಲ್ಲ ನನ್ನನ್ನು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಇದೀಗ ಅವರ ಹೇಳಿಕೆಗೆ ಅಭಿಮಾನಿಗಳು ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.
ಡೇರೆನ್ ಸಾಮಿ 2013-14ರ ಐಪಿಎಲ್ ಅವಧಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರವಾಗಿ ಆಡುತ್ತಿದ್ದಾಗ, ನಮ್ಮ ತಂಡದ ಕೆಲವು ಸದಸ್ಯರು ನನ್ನನ್ನು ಮತ್ತು ಶ್ರೀಲಂಕಾದ ತಿಸಾರಾ ಪೆರೆರಾರನ್ನು 'ಕಾಲು'(ಕರಿಯ) ಎಂದು ಕರೆಯುತ್ತಿದ್ದರು. ಅಂದು ಹಾಗೆಂದರೆ ಬಲಿಷ್ಠ ಕಪ್ಪು ಮನುಷ್ಯ ಎಂದಿರಬೇಕು ಅಂದುಕೊಂಡಿದ್ದೆ, ಆದರೆ ಆ ಪದದ ಅರ್ಥ ಇದೀಗ ನನಗೆ ತಿಳಿದಿದೆ. ಅಂದು ಹಾಗೆ ಕರೆದವರು ನನಗೆ ತಿಳಿದಿದೆ. ಅವರೆಲ್ಲರೂ ನನ್ನನ್ನು ಕ್ಷಮೆ ಕೇಳಬೇಕು ಎಂದು ಸಾಮಿ ಆರೋಪಿಸಿದ್ದರು.