ಬೆಂಗಳೂರು: ವಿಶ್ವಕಂಡ ಶ್ರೇಷ್ಠ ಟೆಸ್ಟ್ ಕ್ರಿಕೆಟರ್ ರಾಹುಲ್ ದ್ರಾವಿಡ್ ಶನಿವಾರ ತಮ್ಮ 47ನೇ ಜನುಮ ದಿನವನ್ನಾಚರಿಸಿಕೊಳ್ಳುತ್ತಿದ್ದು, ಈ ದಿನವೇ ಅವರ ಮಗ ಕರ್ನಾಟಕ ಅಂಡರ್ 14 ತಂಡಕ್ಕೆ ಆಯ್ಕೆಯಾಗುವ ಮೂಲಕ ಅಪ್ಪನಿಗೆ ಅತ್ಯುತ್ತಮ ಉಡುಗೊರೆ ನೀಡಿದ್ದಾರೆ.
ತಂದೆಯ ಹುಟ್ಟುಹಬ್ಬದ ದಿನವೇ ಕರ್ನಾಟಕ ತಂಡಕ್ಕೆ ಆಯ್ಕೆಯಾದ ದ್ರಾವಿಡ್ ಮಗ!
ಶಾಲಾಮಟ್ಟದ ಹಾಗೂ ಅಂಡರ್ 14 ಕ್ಲಬ್ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಸಮಿತ್ ದ್ರಾವಿಡ್ ದಕ್ಷಿಣ ವಲಯದ ಅಂಡರ್ 19 ಟೂರ್ನಿಗೆ ಆಯ್ಕೆಯಾಗಿದ್ದಾರೆ. ಸಮಿತ್ ಕೂಡ ತಂದೆಯಂತೆ ಬಲಗೈ ಬ್ಯಾಟ್ಸ್ಮನ್ ಆಗಿದ್ದು, ಅಪ್ಪನ ಹಾದಿಯಲ್ಲೇ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಈಗಾಗಲೇ ಶಾಲಾಮಟ್ಟದ ಹಾಗೂ ಅಂಡರ್ 14 ಕ್ಲಬ್ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಸಮಿತ್ ದ್ರಾವಿಡ್ ದಕ್ಷಿಣ ವಲಯದ ಅಂಡರ್ 19 ಟೂರ್ನಿಗೆ ಆಯ್ಕೆಯಾಗಿದ್ದಾರೆ. ಸಮಿತ್ ಕೂಡ ತಂದೆಯಂತೆ ಬಲಗೈ ಬ್ಯಾಟ್ಸ್ಮನ್ ಆಗಿದ್ದು, ಅಪ್ಪನ ಹಾದಿಯಲ್ಲೇ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಇತ್ತೀಚೆಗೆ ಕೆಎಸ್ಸಿಎ ನಡೆಸಿದ ಸೆಲೆಕ್ಷನ್ ಪಂದ್ಯದಲ್ಲಿ ಸಮಿತ್ ದ್ರಾವಿಡ್ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಸಮಿತ್ ಒಂದೇ ಪಂದ್ಯದಲ್ಲಿ ದ್ವಿಶತಕ ಮತ್ತು 94 ರನ್ ಗಳಿಸಿ ಆಯ್ಕೆಗಾರರ ಗಮನ ಸೆಳೆದಿದ್ದರು. ಇದೀಗ ಕರ್ನಾಟಕ ತಂಡದಲ್ಲಿ ಅವಕಾಶ ಸಿಕ್ಕಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಿದ್ಧರಾಗುತ್ತಿದ್ದಾರೆ. ಜನವರಿ 16ರಿಂದ 18ರವರೆಗೆ ಬೆಂಗಳೂರಿನಲ್ಲಿ ದಕ್ಷಿಣ ವಲಯದ ಟೂರ್ನಮೆಂಟ್ ನಡೆಯಲಿದೆ.