ಕರ್ನಾಟಕ

karnataka

ETV Bharat / sports

ಸಮರ್ಥ್​-ಪಡಿಕ್ಕಲ್ ಆರ್ಭಟ: ಕೇರಳ ಬಗ್ಗುಬಡಿದು ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಕರ್ನಾಟಕ

ಟೂರ್ನಿಯುದ್ದಕ್ಕೂ ರನ್​ಗಳ ಹೊಳೆ ಹರಿಸುತ್ತಿರುವ ಕರ್ನಾಟಕದ ಆರಂಭಿಕ ಬ್ಯಾಟ್ಸ್​ಮನ್​ಗಳಾದ ಪಡಿಕ್ಕಲ್​ ಮತ್ತು ಸಮರ್ಥ್​ ಇಂದಿನ ಪಂದ್ಯದಲ್ಲೂ ಭರ್ಜರಿ ಶತಕ ಸಿಡಿಸಿದರು. ಪಡಿಕ್ಕಲ್ 119 ಎಸೆತಗಳಲ್ಲಿ 2 ಸಿಕ್ಸರ್​ ಮತ್ತು 10 ಬೌಂಡರಿಗಳ ನೆರವಿನಿಂದ 101 ರನ್​ ಗಳಿಸಿದರೆ, ಸಮರ್ಥ್​ 158 ಎಸೆತಗಳಲ್ಲಿ 22 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 192 ರನ್​ಗಳಿಸಿ ಔಟಾಗುವ ಮೂಲಕ ಕೇವಲ 8 ರನ್​ಗಳಿಂದ ದ್ವಿಶತಕ ತಪ್ಪಿಸಿಕೊಂಡರು.

By

Published : Mar 8, 2021, 5:44 PM IST

ವಿಜಯ ಹಜಾರೆ ಟ್ರೋಫಿ ಸೆಮಿಫೈನಲ್
ಸಮರ್ಥ್-ಪಡಿಕ್ಕಲ್ ಶತಕ

ನವದೆಹಲಿ: ವಿಜಯ ಹಜಾರೆ ಟ್ರೋಫಿ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ನಾಯಕ ರವಿಕುಮಾರ್ ಸಮರ್ಥ್​ ಮತ್ತು ಯುವ ಬ್ಯಾಟ್ಸ್​​ಮನ್​ ದೇವದತ್​ ಪಡಿಕ್ಕಲ್ ಅವರ ಶತಕಗಳ ನೆರವಿನಿಂದ ಕೇರಳ ವಿರುದ್ಧ ಕರ್ನಾಟಕ 80 ರನ್​ಗಳ ದಿಗ್ವಿಜಯ ಸಾಧಿಸಿ ಸತತ 2ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದೆ.

ಟೂರ್ನಿಯುದ್ದಕ್ಕೂ ರನ್​ಗಳ ಹೊಳೆ ಹರಿಸುತ್ತಿರುವ ಕರ್ನಾಟಕದ ಆರಂಭಿಕ ಬ್ಯಾಟ್ಸ್​ಮನ್​ಗಳಾದ ಪಡಿಕ್ಕಲ್​ ಮತ್ತು ಸಮರ್ಥ್​ ಇಂದಿನ ಪಂದ್ಯದಲ್ಲೂ ಭರ್ಜರಿ ಶತಕ ಸಿಡಿಸಿದರು. ಪಡಿಕ್ಕಲ್ 119 ಎಸೆತಗಳಲ್ಲಿ 2 ಸಿಕ್ಸರ್​ ಮತ್ತು 10 ಬೌಂಡರಿಗಳ ನೆರವಿನಿಂದ 101 ರನ್​ಗಳಿಸಿದರೆ, ಸಮರ್ಥ್​ 158 ಎಸೆತಗಳಲ್ಲಿ 22 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 192 ರನ್​ಗಳಿಸಿ ಔಟಾಗುವ ಮೂಲಕ ಕೇವಲ 8 ರನ್​ಗಳಿಂದ ದ್ವಿಶತಕ ತಪ್ಪಿಸಿಕೊಂಡರು.

ಈ ಆರಂಭಿಕ ಜೋಡಿ ಮೊದಲ ವಿಕೆಟ್​ಗೆ 249 ರನ್​ ಸೇರಿಸಿತು. 101 ರನ್​ಗಳಿಸಿದ್ದ ಪಡಿಕ್ಕಲ್​ 43ನೇ ಓವರ್​ನಲ್ಲಿ ಔಟಾದರೆ, ಸಮರ್ಥ್​ 49ನೇ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇವರಿಬ್ಬರ ವಿಕೆಟ್​ ಬಿದ್ದ ನಂತರ ಅಬ್ಬರಿಸಿದ ಮನೀಶ್ ಪಾಂಡೆ ಕೇವಲ 20 ಎಸೆತಗಳಲ್ಲಿ 34 ರನ್​ಗಳಿಸಿ ತಂಡದ ಮೊತ್ತವನ್ನು 338 ರನ್​ಗಳಿಗೆ ಹೆಚ್ಚಿಸಿದರು.

ಕರ್ನಾಟಕದ 3 ವಿಕೆಟ್​ಗಳನ್ನು ಎನ್​ಪಿ ಬಾಸಿಲ್​ ಪಡೆದುಕೊಂಡರು. ಅನುಭವಿ ಶ್ರೀಶಾಂತ್​ 73 ರನ್​ ಬಿಟ್ಟುಕೊಟ್ಟು ದುಬಾರಿಯಾದರು.

ಇನ್ನು 339 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಕೇರಳ ತಂಡ 43.4 ಓವರ್​ಗಳಲ್ಲಿ 258 ರನ್​ಗಳಿಗೆ ಆಲೌಟ್ ಆಯಿತು. ಆರಂಭದಲ್ಲೇ ರಾಬಿನ್ ಉತ್ತಪ್ಪ (2), ರೋಹನ್​ ಕನ್ನುಮ್ಮಲ್​ (0) ಮತ್ತೊಮ್ಮೆ ವಿಫಲರಾದರು. ವಿಷ್ಣು ವಿನೋದ್ (28) ನಾಯಕ ಸಚಿನ್​ ಬೇಬಿ (27) ಕೂಡ ಹೆಚ್ಚು ರನ್​ ಗಳಿಸುವಲ್ಲಿ ವಿಫಲರಾದರು,

ಆದರೆ ವತ್ಸಲ ಗೋವಿಂದ್ (92) ಮತ್ತು ಮೊಹಮ್ಮದ್ ಅಜರುದ್ದೀನ್ 34 ಎಸೆತಗಳಲ್ಲಿ 52 ರನ್​ಗಳಿಸಿ ಕರ್ನಾಟಕ ಬೌಲರ್​ಗಳಿಗೆ ತಕ್ಕ ಮಟ್ಟಿನ ಪೈಪೋಟಿ ನೀಡಿದರಾದರೂ, ಇವರ ಹೋರಾಟ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಕರ್ನಾಟಕ ಪರ ರೋನಿತ್ ಮೋರೆ 35 ರನ್​ ನೀಡಿ 5 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೇಯಸ್ ಗೋಪಾಲ್ ಮತ್ತು ಕೃಷ್ಣಪ್ಪ ಗೌತಮ್​ ತಲಾ 2 ವಿಕೆಟ್​ ಪಡೆದರು.

ಇದನ್ನು ಓದಿ:ಸತತ 4ನೇ ಶತಕ ಸಿಡಿಸಿ ಸಂಗಕ್ಕಾರ ದಾಖಲೆ ಸರಿಗಟ್ಟಿದ ಪಡಿಕ್ಕಲ್

ABOUT THE AUTHOR

...view details