ರಾಂಚಿ:ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ತಂಡ ಬಾಂಗ್ಲಾ ವಿರುದ್ಧ ವಿರೋಚಿತ ಸೋಲು ಕಂಡಿದ್ದು, ಈ ಮೂಲಕ ಮತ್ತೊಮ್ಮೆ ವಿಶ್ವಕಪ್ ಎತ್ತಿ ಹಿಡಿಯುವ ಕನಸು ಕಾಣುತ್ತಿದ್ದ ಯಂಗ್ ಇಂಡಿಯಾ ನಿರಾಸೆಗೊಳಗಾಗಿದೆ.
ಟೀಂ ಇಂಡಿಯಾ ಫೈನಲ್ನಲ್ಲಿ ಮುಗ್ಗರಿಸುತ್ತಿದ್ದಂತೆ ಭಾರತೀಯರು ನಿರಾಸೆಗೊಂಡಿದ್ದು, ಅಂಡರ್-19 ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದ ಸುಶಾಂತ್ ಮಿಶ್ರಾ ಕುಟುಂಬ ಬೇಸರದಲ್ಲೇ ತಮ್ಮ ಅಭಿಪ್ರಾಯ ಹೊರಹಾಕಿದೆ. ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುವಂತೆ ದೇವರ ಮೊರೆ ಹೋಗಿದ್ದ ಕುಟುಂಬ ಫೈನಲ್ನಲ್ಲಿ ಸೋಲು ಕಾಣುತ್ತಿದ್ದಂತೆ ಆಘಾತಕ್ಕೊಳಗಾಗಿದ್ದು, ಈ ವೇಳೆ ಕಣ್ಣೀರು ಸಹ ಹಾಕಿದ್ದಾರೆ.