ಮುಂಬೈ:ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಲಾಕ್ಡೌನ್ ನಿಯಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಲೇ ಕೆಲವು ವಿಶೇಷ ಕಾರ್ಯ ನಿರ್ವಹಿಸುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ಜೊತೆಗೆ ಮಾದರಿಯಾಗುತ್ತಿದ್ದಾರೆ.
ದೇಶದೆಲ್ಲೆಡೆ ಕೊರೊನಾ ಭೀತಿಯಿಂದ ಲಾಕ್ಡೌನ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಸಚಿನ್ ತಮ್ಮ ಕುಟುಂಬ ಹಾಗೂ ಸಾಮಾಜಿಕ ಜಾಲಾತಾಣದಲ್ಲಿ ಸಂವಾದ ಮಾಡುತ್ತಾ ಟೈಮ್ ಪಾಸ್ ಮಾಡುವುದರ ಜೊತೆಗೂ ಕೆಲವು ಆಶ್ಚರ್ಯಕರ ಕೆಲಸ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ತಮ್ಮ ಹೇರ್ ಕಟ್ ಮಾಡಿ ಕೊಂಡು ಸುದ್ದಿಯಾಗಿದ್ದ ಅವರು, ಇದೀಗ ತಮ್ಮ ಮಗನ ಹೇರ್ ಕಟ್ ಮಾಡಿ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.
ತಮ್ಮ ಮಗನಿಗೆ ಹೇರ್ ಕಟ್ ಮಾಡುತ್ತಿರುವ ವಿಡಿಯೋ ತುಣಕನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಸಚಿನ್, ‘ಒಬ್ಬ ತಂದೆಯಾಗಿ ಮಕ್ಕಳಿಗೆ ಅಗತ್ಯವಿರುವ ಎಲ್ಲ ಕೆಲಸಗಳನ್ನು ಮಾಡಬೇಕಾಗುತ್ತದೆ. ಮಕ್ಕಳೊಂದಿಗೆ ಆಟ, ಜಿಮ್ ಅಥವಾ ಅವರ ಹೇರ್ಕಟ್ ಇರಬಹುದು ಎಂಬುದರಲ್ಲಿ ಯಾವುದೆ ಮಾತಿಲ್ಲ. ಏನೇ ಆಗಲಿ ಹೇರ್ಕಟ್ ಮಾಡಿದ ನಂತರ ಮಗ ಹ್ಯಾಂಡ್ಸಮ್ ಆಗಿದ್ದಾನೆ. ನನಗೆ ಸಲೂನ್ ಸಹಾಯಕಿಯಾಗಿದ್ದ ತಮ್ಮ ಮಗಳು ಸಾರಾ ತೆಂಡೂಲ್ಕರ್ಗೆ ಧನ್ಯವಾದಗಳು’ಎಂದು ಬರೆದುಕೊಂಡಿದ್ದಾರೆ.